ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022
ಕರ್ಫ್ಯೂ ಜಾರಿಯಾದರೂ ಶಿವಮೊಗ್ಗದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ ನಿಂತಿಲ್ಲ. ಮೂರು ಆಟೋ ರಿಕ್ಷಾ ಮತ್ತು ಎರಡು ಬೈಕ್’ಗೆ ಬೆಂಕಿ ಹಚ್ಚಲಾಗಿದೆ.
ಇವತ್ತು ಬೆಳಗಿನ ಜಾವ ಟಿಪ್ಪುನಗರ ಮತ್ತು ಕೊರಮ ಕೇರಿಯಲ್ಲಿ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ಶಿವಮೊಗ್ಗ ನಗರದಲ್ಲಿ ರಾತ್ರಿಯಿಂದ ಕರ್ಫ್ಯೂ
ಹೆಚ್ಚಿನ Shimoga News, Shivamogga News ಮತ್ತು CRIME DIARY, SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
