ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ಗಾಗಿ ಶೋಧ

THIRTHAHALLI NEWS, 19 NOVEMBER 2024 : ತೀರ್ಥಹಳ್ಳಿಯಲ್ಲಿ ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ (Manager) ಒಬ್ಬರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅವರ ಚಪ್ಪಲಿ ಮತ್ತು ಮೊಬೈಲ್‌ ಫೋನ್‌ ನದಿ ದಂಡೆ ಮೇಲೆ ಪತ್ತೆಯಾಗಿದೆ.

ತೀರ್ಥಹಳ್ಳಿಯ ತುಂಗಾ ನದಿ ಸೇತುವೆ ಸಮೀಪ ದಂಡೆ ಮೇಲೆ ಚಪ್ಪಲಿ ಮತ್ತು ಮೊಬೈಲ್‌ ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೊಬೈಲ್‌ ಪರಿಶೀಲಿಸಿದಾಗ ಅದು ಬ್ಯಾಂಕ್‌ ಮ್ಯಾನೇಜರ್‌ಗೆ ಒಬ್ಬರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಹಾಗಾಗಿ ಅಗ್ನಿಶಾಮಕ ಸಿಬ್ಬಂದಿ ತುಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

THIRTHAHALLI-BREAKING-NEWS

ಇದನ್ನೂ ಓದಿ » ಹೆಬ್ರಿಯಲ್ಲಿ ಎನ್‌ಕೌಂಟರ್‌, ನಕ್ಸಲ್‌ ನಾಯಕ ಬಲಿ

ಬ್ಯಾಂಕ್‌ ಮ್ಯಾನೇಜರ್‌ ಕುರಿತು ಪೊಲೀಸರು ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಶೋಧ ಕಾರ್ಯ ಮುಂದುವರೆದಿದೆ. ತೀರ್ಥಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

Manager

Thirthahalli-Tunga-Bridge

Leave a Comment