ಬ್ಯಾಂಕ್‌ ಮ್ಯಾನೇಜರ್‌ಗೆ ಕರೆ ಮಾಡಿದ ಶಿಕ್ಷಕಿ, 24 ಗಂಟೆ ಬಳಿಕ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA NEWS, 22 OCTOBER 2024 : ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ (Bank) ಮ್ಯಾನೇಜರ್‌ ನಂಬರ್‌ ಸರ್ಚ್‌ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್‌‌ ಖಾತೆಯಿಂದ 9.19 ಲಕ್ಷ ರೂ. ಕಣ್ಮರೆಯಾಗಿದೆ. ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬ್ಯಾಂಕಿಂಗ್‌ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯ) ಗೂಗಲ್‌ನಲ್ಲಿ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಮೊಬೈಲ್‌ ನಂಬರ್‌ ಸರ್ಚ್‌ ಮಾಡಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್‌ ಸೋಗಿನಲ್ಲಿ ಮಾತನಾಡಿದ್ದ. ಆತ ಸೂಚಿಸಿದ ಮೊಬೈಲ್‌ ಆ್ಯಪ್ ಅನ್ನು ಶಿಕ್ಷಕಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಚೆಕ್‌ ಕ್ಲಿಯರೆನ್ಸ್‌ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ.

11 ಬಾರಿ ಹಣ ವರ್ಗಾವಣೆ

ಮರು ದಿನ ಅದೇ ನಂಬರ್‌ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್‌ ಕ್ಲಿಯರೆನ್ಸ್‌ ಆಗಲಿದೆ ಎಂದು ಮ್ಯಾನೇಜರ್‌ ಸೋಗಿನಲ್ಲಿದ್ದಾತ ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್‌ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು. ಒಟ್ಟು 9.19 ಲಕ್ಷ ರೂ. ಹಣ ಬೇರೆಡೆಗೆ ವರ್ಗವಾಗಿತ್ತು.

Online-Fraud-In-Shimoga

ಇದನ್ನೂ ಓದಿ » GOOD MORNING SHIMOGA | ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಸುದ್ದಿ

ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment