ಶಿವಮೊಗ್ಗ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹೊಳೆಬೆನವಳ್ಳಿ ರಿಂಗ್ ರೋಡ್ ಸಮೀಪ ಸಂಭವಿಸಿದೆ.
ಪುರಲೆಯ ಸುಬ್ಬಯ್ಯ ಆಸ್ಪತ್ರೆ ಉದ್ಯೋಗಿ ಶಕ್ತಿವೇಲು (49) ಗಾಯಗೊಂಡವರು. ಪತ್ನಿಯನ್ನು ಕರೆತರಲು ತಮ್ಮ ಬೈಕ್‌ನಲ್ಲಿ ಆಸ್ಪತ್ರೆ ಕಡೆಗೆ ಹೊರಟಿದ್ದರು. ಹೊಳೆಬೆನವಳ್ಳಿ ಗ್ರಾಮದ ರಿಂಗ್ ರೋಡ್ ದಾಟಿ ಹೊಸ ಮಳಿಗೆಗಳ ಎದುರು ಸಾಗುತ್ತಿದ್ದಾಗ, ಹಿಂಬದಿಯಿಂದ ಬಂದ ಬೈಕ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಕ್ತಿವೇಲು ಅವರ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಪ್ರಜ್ಞೆ ತಪ್ಪಿದ್ದರು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಸ್ಥಳೀಯರು ಅವರನ್ನು ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:➤ ಮಾಚೇನಹಳ್ಳಿ ಫ್ಲೈ ಓವರ್ ಮೇಲೆ ಬೈಕುಗಳು ಡಿಕ್ಕಿ, KSRP ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ, ಹೇಗಾಯ್ತು ಘಟನೆ?