ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಬೈಕ್‌ನ ಮುಂಭಾಗದಲ್ಲಿ ಅಕ್ಕಮೂಟೆ (Rice Bag) ಇಟ್ಟುಕೊಂಡು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ಪಿಇಎಸ್ ಕಾಲೇಜು ಹಿಂಭಾಗ ಕಿಮ್ಮನೆ ಗಾಲ್ಫ್ ಕ್ಲಬ್‌ಗೆ ತೆರಳುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಕೇರಳ ಮೂಲದ ಎರ್ನಾಕುಲಂನ ಜೋಬಿ ಪೌಲ್ (45) ಮೃತ ಬೈಕ್ ಸವಾರ. ಇಲ್ಲಿನ ಫಾರಂ ಒಂದರಲ್ಲಿ ಜೋಬಿ ಪೌಲ್ ಕೆಲಸ ಮಾಡುತ್ತಿದ್ದರು. ಸಾಗರ ರಸ್ತೆಯ ಅಂಗಡಿಯೊಂದರಲ್ಲಿ ಅಕ್ಕಿ ಮೂಟೆ (Rice Bag) ಖರೀದಿಸಿ, ಅದನ್ನು ಬೈಕಿನ ಮುಂಭಾಗದಲ್ಲಿ ಇರಿಸಿಕೊಂಡು ಫಾರಂಗೆ ಹಿಂತಿರುಗುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್ ಗುಂಡಿಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ.

ಗುಂಡಿಗೆ ಬಿದ್ದ ಜೋಬಿ ಪೌಲ್ ತಲೆ ಸಿಮೆಂಟ್ ಕಂಬಕ್ಕೆ ಹೊಡೆದುಕೊಂಡಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಭದ್ರಾವತಿ MPM ಕುರಿತು ಬೆಂಗಳೂರಿನಲ್ಲಿ ಮಹತ್ವದ ಮೀಟಿಂಗ್, ಏನೇನು ಚರ್ಚೆಯಾಯ್ತು?
LATEST NEWS
- ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

- ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

- ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

- ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

- ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

About The Editor
ನಿತಿನ್ ಆರ್.ಕೈದೊಟ್ಲು
















