NEWS HIGHLIGHTS
SHIVAMOGGA LIVE NEWS | 30 DECEMBER 2022
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಆನಂದಪುರ : ಬೈಕ್ ಸ್ಕಿಡ್ (skid) ಆಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ.

ಭೈರಾಪುರದ ದಾನಪ್ಪ (41) ಮೃತ ದುರ್ದೈವಿ. ಬುಧವಾರ ರಾತ್ರಿ ಶಿಕಾರಿಪುರ ಸಂಪರ್ಕದ ಕೆಶಿಪ್ ಹೆದ್ದಾರಿಯಲ್ಲಿ ಗೌತಮಪುರದ ಪೀರನಕಣಿವೆ ಬಳಿ ಬೈಕ್ ಸ್ಕಿಡ್ (skid) ಆಗಿ ದಾನಪ್ಪ ಬಿದ್ದು ಗಾಯಗೊಂಡಿದ್ದರು.
ಇದನ್ನೂ ಓದಿ – ಬುಕ್ ಮಾಡಿದ ಸೀಟ್ ಬಿಟ್ಟು ಮತ್ತೊಂದು ಸೀಟ್ ಕೇಳಿದ ಪ್ರಯಾಣಿಕ, ಕೊಡದಿದ್ದಕ್ಕೆ ರಂಪಾಟ, ಹಲ್ಲೆ
ದಾನಪ್ಪ ಅನಂದಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

CLICK & JOIN – OUR WHATSAPP GROUP