ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮುಗಿಸಿ ಬಂದ ಯುವಕನಿಗೆ ಕಾದಿತ್ತು ಆಘಾತ

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಬಂದಿದ್ದ ಯುವಕನೊಬ್ಬನ ಬೈಕ್‌ ಕಳ್ಳತನವಾಗಿದೆ. ವಿದ್ಯಾನಗರದ ಶಮಂತ ಜಿ.ಎಂ. ಎಂಬುವವರ ಸ್ಪ್ಲೆಂಡರ್‌ ಬೈಕ್‌ ನಾಪತ್ತೆಯಾಗಿದೆ ಎಂದು ದೂರು ದಾಖಲಾಗಿದೆ. ಸೆಪ್ಟೆಂಬರ್ 25ರ ರಾತ್ರಿ ಶಿವಮೊಗ್ಗ ನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ನೋಡಲು ಶಮಂತ್‌ ಬೈಕಿನಲ್ಲಿ ಬಂದಿದ್ದರು.

ದುರ್ಗಿಗುಡಿಯ ಆರ್‌.ಎಂ.ಆರ್‌ ರಸ್ತೆಯ ಹೆಚ್.ಎಂ. ಪೆಟ್ರೋಲ್ ಬಂಕ್ ಎದುರು ರಾತ್ರಿ ಬೈಕ್ ನಿಲ್ಲಿಸಿ, ಮೆರವಣಿಗೆ ನೋಡಲು ತೆರಳಿದ್ದರು. ಮೆರವಣಿಗೆ ಮುಗಿಸಿಕೊಂಡು ರಾತ್ರಿ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

140823-Jayanagara-Police-Station