ಶಿವಮೊಗ್ಗ: ನಗರದ ಅಮೀರ್ ಅಹಮ್ಮದ್ ಸರ್ಕಲ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ (Bike Stolen) ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?
ವಿದ್ಯಾನಗರದ ನಿವಾಸಿ ಪವನ್ ಎಂ.ಆರ್. ಎಂಬುವವರು ಕಳೆದ ಫೆಬ್ರವರಿ 24ರಂದು ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ತಮ್ಮ ಟಿವಿಎಸ್ ಅಪಾಚಿ ಬೈಕ್ ಅನ್ನು ಎ.ಎ. ಸರ್ಕಲ್ ಬಳಿಯ ಗ್ರಾಂಡ್ ಹೋಟೆಲ್ ಮುಂದೆ ನಿಲ್ಲಿಸಿದ್ದರು. ರಾತ್ರಿ 11:45ಕ್ಕೆ ವಾಪಸ್ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.
ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಕೂಡಲೇ ಪವನ್ ಅವರು ತಮ್ಮ ಸ್ನೇಹಿತರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾನಗರದ ದುರ್ಗಾಂಬ ಜಾತ್ರೆ ಹಾಗೂ ವೈಯಕ್ತಿಕ ಕೆಲಸದಿಂದಾಗಿ ದೂರು ನೀಡಲು ತಡವಾಗಿದೆ ಎಂದು ಪವನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



