ಟಿಕೆಟ್‌ ಬುಕ್‌ ಮಾಡಿ ಪ್ಲಾಟ್‌ಫಾರಂ 1ಕ್ಕೆ ಮರಳಿದ ಯುವಕನಿಗೆ ಕಾದಿತ್ತು ಆಘಾತ

SHIVAMOGGA LIVE NEWS | 19 FEBRUARY 2024

SHIMOGA : ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸಿನ ಟಿಕೆಟ್‌ ಬುಕ್‌ ಮಾಡಿ ಹಿಂತಿರುಗುವಷ್ಟರಲ್ಲಿ ಯಮಹಾ ಆರ್‌ಎಕ್ಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ಶರತ್‌ ಎಂಬುವವರು ರಾತ್ರಿ 9 ಗಂಟೆ ಹೊತ್ತಿಗೆ ಬೈಕ್‌ ತಂದು ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ನಿಲ್ಲಿಸಿದ್ದರು. 9.30ರ ಹೊತ್ತಿಗೆ ಮನೆಗೆ ತೆರಳಲು ಪಾರ್ಕಿಂಗ್‌ ಮಾಡಿದ್ದ ಸ್ಥಳಕ್ಕೆ ಬಂದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಅವರು ಬಳಿಕ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಚಲಿಸುತ್ತಿದ್ದ ಗೂಡ್ಸ್‌ ವಾಹನದಿಂದ ಜಿಗಿದ ಹಸು, ಒಳಗಿದ್ದವು ಇನ್ನೂ ಏಳೆಂಟು ಗೋವು, ಮುಂದೇನಾಯ್ತು?

Shimoga-Private-Bus-Stand-Board

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment