ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರ ಬಂದ ಯುವಕನಿಗೆ ಕಾದಿತ್ತು ಶಾಕ್

SHIVAMOGGA LIVE NEWS | 1 JULY 2024

SHIMOGA : ರೈಲ್ವೆ ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಬೈಕ್‌ (bike) ಕಳುವಾಗಿದೆ. ನಿಲ್ದಾಣದೊಳಗೆ ಹೋಗಿ ಬರುವಷ್ಟರಲ್ಲಿ ಕೃತ್ಯ ನಡೆದಿದೆ.

ಭದ್ರಾಪುರದ ದುರ್ಗೇಶ ಎಂಬುವವರ ಪರಿಚಿತರೊಬ್ಬರು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು. ಕೆಲವು ಸಾಮಗ್ರಿಗಳನ್ನು ಅವರಿಗೆ ಕೊಡಬೇಕಿದ್ದರಿಂದ ದುರ್ಗೇಶ ಬೈಕ್‌ನಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಸ್ಪ್ಲೆಂಡರ್‌ ಬೈಕ್ ನಿಲ್ಲಿಸಿ ನಿಲ್ದಾಣದ ಒಳಗೆ ಹೋಗಿ ವಾಪಸ್‌ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ದುರ್ಗೇಶ ಬಳಿಕ ಠಾಣೆಗೆ ದೂರು ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಇದನ್ನೂ ಓದಿ – ಭದ್ರಾವತಿ VISL ಕಾರ್ಖಾನೆ ಒಳಗೆ ಹೇಗಿದೆ? ಯಂತ್ರೋಪಕರಣದ ಸ್ಥಿತಿ ಏನು? ಇಲ್ಲಿವೆ 30 ಫೋಟೊಗಳು

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment