ಶಿವಮೊಗ್ಗದ ಡಾಕ್ಟರ್‌ಗೆ ಲಕ್ಷ ಲಕ್ಷ ರೂ. ವಂಚನೆ, ಚೆಕ್‌ ಬರೆದುಕೊಟ್ಟು ಸಂಕಷ್ಟಕ್ಕೆ ಸಿಲುಕಿದ ವೈದ್ಯೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 26 JULY 2024 : ಬಿಟ್‌ ಕಾಯಿನ್‌ (Bit Coin) ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವೈದ್ಯೆಯೊಬ್ಬರಿಗೆ (ಹೆಸರು ಗೌಪ್ಯ) ಲಕ್ಷಾಂತರ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ನಲ್ಲಿ ಕಾಯಿನ್‌ ತೋರಿಸಿ ವಂಚನೆ

ಶಿವಮೊಗ್ಗದ ವೈದ್ಯೆಗೆ ಪರಿಚಿತ ವ್ಯಕ್ತಿಯೊಬ್ಬ ಜಿಡಿಸಿಸಿ ಕಾಯಿನ್‌ ಮೇಲೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಆ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ವೈದ್ಯೆ ಬಳಿ ಕರೆತಂದು, ಪ್ರತಿ ಡಿಜಿಟಲ್‌ ಕಾಯಿನ್‌ಗೆ 10 ಸಾವಿರ ರೂ. ಇರಲಿದೆ. ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದರು. ಚೆಕ್‌ ಮೂಲಕ 28 ಲಕ್ಷ ರೂ. ಹಣ ಪಡೆದುಕೊಂಡಿದ್ದರು.

ವರಸೆ ಬದಲಿಸಿ ವಂಚನೆ

ಸ್ವಲ್ಪ ಸಮಯದ ಬಳಿಕ ಹಣದ ಕುರಿತು ವೈದ್ಯೆ ವಿಚಾರಿಸಿದಾಗ ಬಿಟ್‌ ಕಾಯಿನ್‌ ಇನ್ನು ಭಾರತಕ್ಕೆ ಬಂದಿಲ್ಲ ಎಂದು ಸಬೂಬು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ ಎರಡು ವರ್ಷದಿಂದ ನಾನಾ ಕಾರಣ ಹೇಳಿದ್ದು, ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ವೈದ್ಯೆ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ ⇓

ಶಿವಮೊಗ್ಗದಲ್ಲಿ ಮನೆ ಮೇಲೆ ಬಿದ್ದ ಬೃಹತ್‌ ಮರ | ತೀರ್ಥಹಳ್ಳಿಯಲ್ಲಿ ಮರ ಬುಡಮೇಲು – 3 ಫಟಾಫಟ್‌ ನ್ಯೂಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 26, 2024

Leave a Comment