ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಹೊರವಲಯದ ಪುಟ್ಟಪ್ಪನ ಕ್ಯಾಂಪ್ ಬಳಿ ಪಾರ್ಟಿ ಮಾಡುವಾಗ ತುಂಗಾ ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಕಳೆದ ರಾತ್ರಿ ಅವರ ಮೃತದೇಹ ಪತ್ತೆಯಾಗಿದೆ.
ಸೂಳೆಬೈಲು ಫೈಜಾನ್ (29) ಎಂಬಾತ ಮೃತ ವ್ಯಕ್ತಿ. ಸುಮಾರು ಏಳೆಂಟು ಜನ ಪಾರ್ಟಿ ಮಾಡುವಾಗ ಇಬ್ಬರು ನೀರಿಗೆ ಇಳಿದಿದ್ದಾರೆ. ಅವರಲ್ಲಿ ಒಬ್ಬ ಮೇಲೆ ಬಂದಿದ್ದು, ಇನ್ನೊಬ್ಬನ ಸುಳಿವು ಸಿಕ್ಕಿರಲಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಶೋಧ ಕಾರ್ಯ ನಡೆಸಿದ್ದರು. ಕಳೆದ ರಾತ್ರಿ ಫೈಜಾನ್ ಮೃತದೇಹ ಪತ್ತೆಯಾಗಿದೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತನಿಖೆ ನಡೆಯುತ್ತಿದೆ.
