ಶಿವಮೊಗ್ಗ ಗಾಂಧಿ ಬಜಾರ್ ಬಳಿ ದರೋಡೆಗೆ ಸಂಚು, ಪಿಸ್ತೂಲು ಸಹಿತ ಸಿಕ್ಕಿಬಿದ್ದ ಅಂತರ ಜಿಲ್ಲಾ ದರೋಡೆಕೋರರು

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020

ಶಿವಮೊಗ್ಗದ ಗಾಂಧಿ ಬಜಾರ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಂದು ಪಿಸ್ತೂಲು, ನಾಲ್ಕು ಗುಂಡು, ಒಂದು ಚಾಕು, ನಾಲ್ಕು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಮಧ್ಯಪ್ರದೇಶ ಮೂಲದ ಬಳ್ಳಾರಿಯ ಮೋತಿ ಸರ್ಕಲ್ ನಿವಾಸಿ ಸುರೇಶ್ ಸಿಂಗ್ (20), ಬಳ್ಳಾ ಪೋರ್ಟ್ ರಸ್ತೆ ನಿವಾಸಿ ರಣವೀರ್ ಸಿಂಗ್ (34), ರಾಯದುರ್ಗ ರಸ್ತೆಯ ರಾಮಲಾಲ್ (21) ಬಂಧಿತ ದರೋಡೆಕೋರರು.

ಆರೋಪಿಗಳು ದರೋಡೆಯ ಉದ್ದೇಶದಿಂದಲೇ ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಉಮೇಶ್ ನಾಯಕ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ದೊಡ್ಡಪೇಟೆ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಮಂಜಮ್ಮ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 15, 2020 at 8:38 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 15, 2020

Leave a Comment