ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಪೊಲೀಸ್ ಠಾಣೆ ಸಮೀಪದಲ್ಲೇ ಬಸ್ ಕಂಡಕ್ಟರ್ ಒಬ್ಬರ ಬೈಕ್ ಕಳ್ಳತನವಾಗಿದೆ. ಟಿಕೆಟ್ ಬುಕಿಂಗ್ ಮಾಡಲು ಹೋಗಿದ್ದ ಕಂಡಕ್ಟರ್ ಮರಳಿ ಬರುವಷ್ಟರಲ್ಲಿ ಕಳ್ಳರು ಬೈಕ್ ಕದ್ದೊಯ್ದಿದ್ದಾರೆ.
ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಮೊಬೈಲ್ ಟವರ್ ಕೆಳಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ರಾಜಶೇಖರ್ ಎಂಬುವವರು ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಟಿಕೆಟ್ ಬುಕಿಂಗ್ ಮಾಡಲು ನಿಲ್ದಾಣಕ್ಕೆ ಬಂದಿದ್ದರು.
ಮಧ್ಯಾಹ್ನ ಬೈಕ್ ನಿಲ್ಲಿಸಿದ್ದ ರಾಜಶೇಖರ್ ಸಂಜೆ ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ ಕಳ್ಳತನವಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಸಮೀಪದಲ್ಲೇ ಘಟನೆ ಸಂಭವಿಸಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



