ಖಾಸಗಿ ಬಸ್ ಮಾಲೀಕ ನಿಧನದ ಬಳಿಕ 11.65 ಲಕ್ಷ ರೂ. ವಂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022

ನಗರದ ಖಾಸಗಿ ಬಸ್ ಮಾಲೀಕ ನಿಧನದ ಬಳಿಕ ಅವರ ಸಹೋದರ, ಆತನ ಪುತ್ರ ಮತ್ತು ಕಂಡಕ್ಟರ್‌ಗಳು 11.65 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೆ ಮೃತ ಮಾಲೀಕನ ಪತ್ನಿ ಮತ್ತು ಮಗಳಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.

Nanjappa Hospital Covid Care Center

ಖಾಸಗಿ ಬಸ್‌ಗಳ ಮಾಲೀಕ ಮೃತಪಟ್ಟ ಬಳಿಕ ನಾಲ್ಕು ಬಸ್‌ಗಳಿಂದ 11,65,013 ರೂ. ದೈನಂದಿನ ಕಲೆಕ್ಷನ್ ಆಗಿತ್ತು. ಆದರೆ ಬಸ್‌ಗಳ ಕಂಡೆಕ್ಟರ್ ಕಲೆಕ್ಷನ್ ಹಣವನ್ನು ಮಾಲೀಕರ ಪತ್ನಿಗೆ ನೀಡದೇ ಸಹೋದರನಿಗೆ ನೀಡಿದ್ದಾರೆ.

ಈ ಬಗ್ಗೆ ಈ ಪ್ರಶ್ನೆ ಮಾಡಿದ್ದಕ್ಕೆ ಅತ್ತಿಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಮೃತ ಮಾಲಿಕನ ಪತ್ನಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | About Shivamogga Live

Shimoga Live News Reach Graphics

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment