ಹೊಳೆಹೊನ್ನೂರು : ಕಾರ್‌ವೊಂದರ ಟೈರ್ (Tyre) ಸ್ಫೋಟಗೊಂಡ ಪರಿಣಾಮ ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸವಾರರೊಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಪಟ್ಟಣದ ಚನ್ನಗಿರಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಹರಮಘಟ್ಟದ ನಿವಾಸಿ ಮಲ್ಲಿಕಾರ್ಜುನ (40) ಮೃತರು. ಕಾರ್‌ವೊಂದರ ಟೈರ್ ಸ್ಫೋಟಗೊಂಡು ಅದು ಇನ್ನೊಂದು ಕಾರ್‌ಗೆ ಡಿಕ್ಕಿ ಹೊಡೆದಿದೆ. ಆ ಕಾರ್ ಬೈಕ್‌ಗೆ ಹೊಡೆದಿತ್ತು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಅಪಘಾತದಿಂದಾಗಿ ಒಂದು ಗಂಟೆಗೂ ಹೆಚ್ಚಿನ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್, ಕೆಲವರಿಗಿದು ಓಪನ್ ಬಾರ್, ಹೇಗಿದೆ ಒಳಗಿನ ಸ್ಥಿತಿ?


