SHIVAMOGGA LIVE NEWS | 1 ಮಾರ್ಚ್ 2022
ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ವಿರುದ್ಧ, ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೇಸ್ 1 : ಚಿಕ್ಕ ಹಿಡಗೋಡು ಗ್ರಾಮ
ಇಲ್ಲಿನ ಆರೊಟ್ಟಿ ಕೆರೆ ಬಳಿ ಸುಮಾರು 8 ಮಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸ್ ಸಿಬ್ಬಂದಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೇಸ್ 2 : ಬಿಳಗಲಿ ಗ್ರಾಮ
ರಸ್ತೆ ಪಕ್ಕದ ಮರವೊಂದರ ಕೆಳಗೆ ಸುಮಾರು 5 ಮಂದಿ ಗುಂಪು ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಆನವಟ್ಟಿ ಠಾಣೆ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.