ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 19 SEPTEMBER 2024 : ಮಹಿಳಾ ಉದ್ಯಮಿಯೊಬ್ಬರಿಗೆ GST ನಂಬರ್ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ತೆರಿಗೆ ಬಾಕಿ ಎಂದು ತೋರಿಸಿದಾಗ ಅನುಮಾನಗೊಂಡ ಮಹಿಳೆ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಹೋದರನ ಸ್ನೇಹಿತನಿಂದಲೇ ಮೋಸ
ಮಹಿಳೆಯೊಬ್ಬರು (ಹೆಸರು ಗೌಪ್ಯ) ತಮ್ಮ ಉದ್ಯಮಕ್ಕೆ ಜಿ.ಎಸ್.ಟಿ ಅಗತ್ಯವಿದ್ದ ಹಿನ್ನೆಲೆ ಸಹೋದರನ ಸ್ನೇಹಿತನಿಂದ ಜಿ.ಎಸ್.ಟಿ ನಂಬರ್ ಮಾಡಿಸಿಕೊಂಡಿರುತ್ತಾರೆ. ಆತ ಮಹಿಳೆಗೆ ಜಿ.ಎಸ್.ಟಿ ಪಾಸ್‌ವರ್ಡ್ ನೀಡಿರಲಿಲ್ಲ. ತೆರಿಗೆ ಇಲಾಖೆ ಅಧಿಕಾರಿಗಳ ಬಳಿ ಮಹಿಳಾ ಉದ್ಯಮಿ ಪರಿಶೀಲನೆ ನಡೆಸಿದಾಗ ಅವರ ಜಿ.ಎಸ್.ಟಿ ನಂಬರ್‌ನಲ್ಲಿ 1.15 ಕೋಟಿ ರೂ. ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಅಲ್ಲದೆ ಈ ವ್ಯವಹಾರಕ್ಕೆ ತೆರಿಗೆ ಬಾಕಿ ಇರುವುದು ಅರಿವಿಗೆ ಬಂದಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಜಿ.ಎಸ್.ಟಿ. ನಂಬರ್ ಅನ್ನು ದುರುಪಯೋಗಪಡಿಸಿಕೊಂಡ ಅಭಿಷೇಕ್ ಎಂಬಾತನ ವಿರುದ್ಧ ಮಹಿಳಾ ಉದ್ಯಮಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » GOOGLE PAY LOAN, ಬ್ಯಾಂಕ್‌ಗೆ ಹೋಗೋದೆ ಬೇಡ, ಸಿಗುತ್ತೆ ಲಕ್ಷ ರೂ. ಸಾಲ