ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 27 AUGUST 2024 : ಇನ್ಸ್ಟಾಗ್ರಾಂನಲ್ಲಿ ಲಾಂಗ್ ಹಿಡಿದು ಪೋಸ್ (Pose) ನೀಡಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ. ಎರಡು ದಿನ ಕಬ್ಬಿಣದ ಲಾಂಗ್ ಹಿಡಿದು ಬಗೆ ಬಗೆ ಪೋಸ್ ನೀಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಏನಿದು ಪ್ರಕರಣ?
ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಜುಲೈ 6 ಮತ್ತು 7ರಂದು ಎರಡು ಪ್ರತ್ಯೇಕ ಪೋಸ್ಟ್ ಪ್ರಕಟಿಸಲಾಗಿತ್ತು. ಜು.6ರ ಪೋಸ್ಟ್ನಲ್ಲಿ ಒಬ್ಬ ಯುವಕ ಲಾಂಗ್ ಎತ್ತಿ ಹಿಡಿದಿರುವ ಪೋಸ್ ನೀಡಿದ್ದ. ಜು.7ರಂದು ಅಪ್ಲೋಡ್ ಆಗಿರುವ ಪೋಸ್ಟ್ನಲ್ಲಿ ಇಬ್ಬರು ಯುವಕರಿದ್ದರು, ಒಬ್ಬಾತ ಲಾಂಗ್ ಹಿಡಿದುಕೊಂಡಿದ್ದ.
ಇದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಯುವಕರ ಪೂರ್ವಪರ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ⇒ ಟೋಲ್ ವಿರುದ್ಧ ಗರಂ, ಶಿವಮೊಗ್ಗದಲ್ಲಿ ಹೋರಾಟಕ್ಕೆ ದಿನಾಂಕ ಫಿಕ್ಸ್, ಸಮಿತಿ ಆರೋಪಗಳೇನು?