ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿ ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. (Gold Coins)
₹11 ಲಕ್ಷ ವಂಚನೆಯಾಗಿದೆ ಎಂದು ಆರೋಪಿಸಿ ಗುತ್ತಿಗೆದಾರ ಗೌತಮ್ ಭಂಡಾರಿ ಎಂಬುವವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ವಂಚನೆ?
ಗೌತಮ್ ಭಂಡಾರಿ ಎಂಬುವವರಿಗೆ ಬೆಂಗಳೂರಿನಲ್ಲಿ ಶಿವಮೊಗ್ಗದ ಪ್ರದೀಪ ಎಂಬಾತನ ಪರಿಚಯವಾಗಿತ್ತು. ಪ್ರದೀಪ ಆಗಾಗ ಅವರಿಗೆ ಕರೆ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಟೂರಿಸ್ಟ್ ಜಾಗಗಳನ್ನು ತೋರಿಸುವುದಾಗಿ ಹೇಳುತ್ತಿದ್ದ. ಗೌತಮ್ ಭಂಡಾರಿ ಅವರು ತಮ್ಮ ಸ್ನೇಹಿತರಾದ ನಾಗೇಶ್, ಚಿಕ್ಕಸ್ವಾಮಿ ಜೊತೆಗೆ ಈಚೆಗೆ ಸಿಗಂದೂರು ದೇವಸ್ಥಾನಕ್ಕೆ ಆಗಮಿಸಿದ್ದರು.
ಶಿವಮೊಗ್ಗದಲ್ಲಿ ಪ್ರದೀಪ್‌ಗೆ ಕರೆ ಮಾಡಿದ್ದರು. ದೇವಸ್ಥಾನದಿಂದ ಹಿಂತಿರುಗುವಾಗ ಶಿವಮೊಗ್ಗ ಸಮೀಪ ಶ್ರೀರಾಂಪುರಕ್ಕೆ ಬರುವಂತೆ ಆತ ತಿಳಿಸಿದ್ದ.
ನಿರ್ಜನ ಪ್ರದೇಶದಲ್ಲಿ ಚಿನ್ನ ನಾಣ್ಯ ಕೊಟ್ಟ
ಶ್ರೀರಾಂಪುರದಲ್ಲಿ ಪ್ರದೀಪ, ವಸಂತ, ಕೊಳ್ಳಿರಘು, ಮುದ್ದಪ್ಪ ಎಂಬುವವರನ್ನು ಕರೆತಂದಿದ್ದ. ಇವರ ಬಳಿ ಚಿನ್ನದ ಪೂರ್ವಜರ ಚಿನ್ನದ ನಾಣ್ಯಗಳಿವೆ. ಮುದ್ದಪ್ಪನ ಮಗಳ ಮದುವೆಗೆ ಹಣ ಹೊಂದಿಸಲು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರದೀಪ ನಂಬಿಸಿದ್ದ. ಬೆಂಗಳೂರಿನಿಂದ ಬಂದಿದ್ದವರ ಕೈಗೆ ಎರಡು ಚಿನ್ನ ನಾಣ್ಯಗಳನ್ನು ಕೊಟ್ಟಿದ್ದ ಎಂದು ಆರೋಪಿಸಲಾಗಿದೆ.

₹11 ಲಕ್ಷಕ್ಕೆ ಚಿನ್ನದ ನಾಣ್ಯಗಳು
ನಾಣ್ಯಗಳನ್ನು ಬೆಂಗಳೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಅಸಲಿ ಚಿನ್ನ ಎಂದು ಗೊತ್ತಾಗಿತ್ತು. ಹಾಗಾಗಿ ಗೌತಮ್ ಭಂಡಾರಿ, ಪ್ರದೀಪ್‌ಗೆ ಕರೆ ಮಾಡಿ ಉಳಿದ ಚಿನ್ನದ ನಾಣ್ಯ ಖರೀದಿಸುವುದಾಗಿ ತಿಳಿಸಿದ್ದರು. 250 ಗ್ರಾಂ ಬಂಗಾರದ ನಾಣ್ಯಗಳಿಗೆ ₹11 ಲಕ್ಷ ಕೊಡಬೇಕು ಎಂದು ಪ್ರದೀಪ ತಿಳಿಸಿದ್ದ ಎಂದು ಆರೋಪಿಸಲಾಗಿದೆ.
ಗುತ್ತಿಗೆದಾರ ಗೌತಮ್ ಭಂಡಾರಿ ಮತ್ತು ಸ್ನೇಹಿತರೆಲ್ಲ ಸೇರಿ ₹11 ಲಕ್ಷ ಹಣದೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಶ್ರೀರಾಂಪುರದ ನಿರ್ಜನ ಪ್ರದೇಶಕ್ಕೆ ತೆರಳಿ, ಪ್ರದೀಪ ಮತ್ತು ಆತನ ಸಹಚರರಿಂದ ಹಣ ಚಿನ್ನದ ನಾಣ್ಯಗಳನ್ನು ಖರೀದಿಸಿದ್ದರು. ಅವುಗಳನ್ನು ಬೆಂಗಳೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಅವು ಚಿನ್ನವಲ್ಲ ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200