ಶಿವಮೊಗ್ಗ: ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ ಗ್ಯಾರೇಜ್‌ವೊಂದರಲ್ಲಿ ಕ್ಯಾಶ್ ಡ್ರಾನಲ್ಲಿದ್ದ ಹಣವನ್ನು ಕಳವು ಮಾಡಲಾಗಿದ್ದು, ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ರವಿ.ಎನ್ ಎಂಬುವವರು ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್‌ನ 2ನೇ ಕ್ರಾಸ್‌ನಲ್ಲಿ ಗ್ಯಾರೇಜ್ ನಡೆಸುತ್ತಿದ್ದಾರೆ. ಜುಲೈ 29ರ ರಾತ್ರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಕ್ಯಾಶ್ ಡ್ರಾನಲ್ಲಿಟ್ಟಿದ್ದ ₹30,000 ನಗದು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಕೂಡ ಗ್ಯಾರೇಜ್‌ನಲ್ಲಿ ಎರಡು ಬಾರಿ ಹಣ ಕಳುವಾಗಿದ್ದು, ಬೇರೆ ಯಾರೋ ಕಳವು ಮಾಡಿರಬಹುದು ಎಂದು ಮಾಲೀಕರು ಸುಮ್ಮನಿದ್ದರು.

ಗ್ಯಾರೇಜ್‌ಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಹಿಂದೆ ಕಳುವಾದ ಹಣ ಸೇರಿದಂತೆ ಒಟ್ಟು ₹48,000 ಹಣವನ್ನು ಕೆಲಸಗಾರನೇ ಕಳವು ಮಾಡಿರುವುದು ಗೊತ್ತಾಗಿದೆ. ಈ ಕುರಿತು ಗ್ಯಾರೇಜ್ ಮಾಲೀಕ ರವಿ ಅವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.