ಶಿವಮೊಗ್ಗ: ಮನೆಗೆ ನುಗ್ಗಿದ ಕಳ್ಳನೊಬ್ಬ ಬೀರುವಿನಲ್ಲಿದ್ದ ₹3 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ನಗರದ ಆಟೋ ಕಾಂಪ್ಲೆಕ್ಸ್ನಲ್ಲಿ ವ್ಯಾಪಾರಿ ಅಲ್ತಾಫ್ ಮನೆಯಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅಲ್ತಾಫ್ ಅವರು ತಮ್ಮ ತಾಯಿಯನ್ನು ಬಸ್ ಸ್ಟ್ಯಾಂಡ್ಗೆ ಬಿಡಲು ತೆರಳಿದ್ದರು. ಮನೆಯ ಬೀಗ ಕಳೆದುಹೋಗಿದ್ದರಿಂದ, ಬಾಗಿಲನ್ನು ಹಾಗೆಯೇ ಹಾಕಿ ತೆರಳಿದ್ದರು. ವಾಪಸ್ ಬರುವಾಗ ಹೊಸ ಬೀಗ ತಂದಿದ್ದ ಅಲ್ತಾಫ್, ಮನೆ ಬಾಗಿಲಿಗೆ ಬೀಗ ಹಾಕಿ ಅಂಗಡಿಗೆ ತೆರಳಿದ್ದರು. ಕೆಲವು ದಿನದ ಬಳಿಕ ಹಣದ ಅವಶ್ಯಕತೆ ಇದ್ದಿದ್ದರಿಂದ ಬೀರು ತೆರೆದು ನೋಡಿದಾಗ ₹3 ಲಕ್ಷ ನಗದು ನಾಪತ್ತೆ ಆಗಿತ್ತು. ಇದರಿಂದ ಆಘಾತಗೊಂಡ ಅವರು ಮುಂಭಾಗದ ಶೋರೂಂ ಒಂದರ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರು. ಆಗ ಅಕ್ಟೋಬರ್ 30ರ ಬೆಳಿಗ್ಗೆ ವ್ಯಕ್ತಿಯೊಬ್ಬ ಮನೆಯ ಹತ್ತಿರ ಸುಳಿದಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಲ್ತಾಫ್ ದೂರು ನೀಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
JOB NEWS
