ಮೇಯಲು ಹೋಗಿದ್ದು 3 ಹಸು, ವಾಪಾಸ್ಸಾಗಿದ್ದು ಒಂದೇ, ರಾತ್ರಿ ಮನೆಯಿಂದ ಅದೂ ನಾಪತ್ತೆ, ಆಗಿದ್ದೇನು?

Published On : ಏಪ್ರಿಲ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಗೋಪಾಳದಲ್ಲಿ ಮೂರು ಹಸುಗಳು ಕಳ್ಳತನವಾಗಿವೆ (cattle theft). ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ರಾಘವೇಂದ್ರ ಎಂಬುವವರಿಗೆ ಸೇರಿದ ಹಸುಗಳು ಕಳವಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ರಾಘವೇಂದ್ರ ಅವರು ತಮ್ಮ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಅವು ವಾಪಸ್ ಮನೆಗೆ ಬಂದಿಲ್ಲ. ಇದರಲ್ಲಿ ಒಂದು ಕಪ್ಪು ಬಣ್ಣದ ಎಚ್‌ಎಫ್ ಹಸು ಹಾಗೂ ಮತ್ತೊಂದು ಬ್ರೌನ್ ಬಣ್ಣದ ಜೆಸ್ಸಿ ಹಸುವಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಕಳೆದುಹೋದ ಹಸುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ರಾತ್ರಿ ಮನೆಯ ಮುಂದೆ ಮಲಗಿದ್ದ ಮತ್ತೊಂದು ಜೆಸ್ಸಿ ಹಸು ಕೂಡ ನಾಪತ್ತೆಯಾಗಿದೆ.

070426-Tunga-Nagara-Police-Station-General-Image.avif

ಸುಮಾರು ₹1.20 ಲಕ್ಷ ಮೌಲ್ಯದ ಒಟ್ಟು ಮೂರು ಹಸುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕುಟುಂಬದವರೆಲ್ಲ ಕೊಳ್ಳೆಗಾಲದಲ್ಲಿದ್ದಾಗ ಗಾಜನೂರಿನ ಮನೆಯಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಮಾಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment