SHIVAMOGGA LIVE NEWS | 22 JULY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಚೈನ್ ಲಿಂಕ್ ಸ್ಕೀಮ್ (Chain Link) ಒಂದರಿಂದ ಲಕ್ಷಾಂತರ ರೂ. ವಂಚನೆಯಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಟ್ರಿಪ್ ಹೆಸರಲ್ಲಿ ಲಕ್ಷ ಲಕ್ಷ ಮೋಸ
ಮೇಕ್ ಫ್ರಿ ಟ್ರಿಪ್ ಎಂಬ ಸ್ಕೇಮ್ ಹೆಸರಿನಲ್ಲಿ 9 ಸಾವಿರ ರೂ. ಹೂಡಿಕೆ ಮಾಡಿದರೆ ಉಚಿತ ಪ್ರವಾಸ ಮತ್ತು ಪ್ರತಿ ತಿಂಗಳು ಹಣ ಗಳಿಸಬಹುದು. ಆರು ಮಂದಿಯನ್ನು ಸೇರಿಸಿದರೆ ಇನ್ನಷ್ಟು ಲಾಭ ಗಳಿಸಬಹುದು ಎಂದು ನಂಬಸಿ ಶಿವಮೊಗ್ಗ ಕಿಶೋರ್ ಕುಮಾರ್ ಎಂಬುವವರಿಗೆ ವಂಚಿಸಲಾಗಿದೆ. ಆರಂಭದಲ್ಲಿ ಹಣ ಹೂಡಿಕೆ ಮಾಡಿದ್ದಾಗ ಪ್ರವಾಸಕ್ಕೆ ಕರೆದೊಯ್ದಿದ್ದರು. ಹೀಗೆ ಹಂತ ಹಂತವಾಗಿ 12,98,370 ರೂ. ಹೂಡಿಕೆ ಮಾಡಿಸಿಕೊಂಡು ಲಾಭಾಂಶ ನೀಡದೆ ವಂಚಿಸಲಾಗಿದೆ ಎಂದು ಕಿಶೋರ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ವಂಚನೆಗೆ ಒಳಗಾದವರು ಒಬ್ಬರೆ ಅಲ್ಲ
ಇದೇ ರೀತಿ ಪ್ರಸನ್ನ ಎಂಬುವವರು 90 ಸಾವಿರ ರೂ., ಗೈಬಾನ್ ಖಾನ್ ಎಂಬುವವರು 1.80 ಲಕ್ಷ ರೂ., ದೊಡ್ಡವೀರಪ್ಪ 2.18 ಲಕ್ಷ ರೂ., ಮೋಹನ್ 4.85 ಲಕ್ಷ ರೂ., ಶಿವಶಂಕರ 2.13 ಲಕ್ಷ ರೂ., ಗಂಗಾವತಿ 45 ಸಾವಿರ ರೂ., ರಮೇಶ್ 9 ಸಾವಿರ ರೂ., ಅಬ್ದುಲ್ ಮುತಲಬ್ 9 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ ⇓
ಕಂತೆ ಕಂತೆ ದುಡ್ಡು, ಲಕ್ಷ ಲಕ್ಷದ ಚಿನ್ನ, ಶಿವಮೊಗ್ಗದ ಅಧಿಕಾರಿಯ ಮನೆ, ಲಾಕರ್‌ನಲ್ಲಿ ಸಿಕ್ಕ ಹಣ ಸೀಜ್
LATEST NEWS
- ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?

- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

About The Editor
ನಿತಿನ್ ಆರ್.ಕೈದೊಟ್ಲು





