ಶಿವಮೊಗ್ಗ ಲೈವ್.ಕಾಂ | SHIMOGA NEWS | 16 MARCH 2021
ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳರು ಕೈ ಚಳಕ ತೋರಿಸಿದ್ದಾರೆ. ಬೈಕ್‍ನಲ್ಲಿ ಬಂದು ಮಹಿಳೆಯೊಬ್ಬರ ಕೊರಳಲ್ಲಿ ಇದ್ದ ಮಾಂಗಲ್ಯ ಸರ ಎಳೆದೊಯ್ದಿದ್ದಾರೆ. ನಗರದ ಹೃದಯ ಭಾಗ ತಿಲಕನಗರದಲ್ಲಿ ಘಟನೆ ಸಂಭವಿಸಿದೆ.
ಸುವರ್ಣಾ (65) ಎಂಬುವವರ ಮಾಂಗಲ್ಯ ಸರ ಕಳ್ಳತನವಾಗಿದೆ. ಎರಡು ಮಾಂಗಲ್ಯವಿದ್ದ 35 ಗ್ರಾಂನ 1.22 ಲಕ್ಷ ರೂ. ಅಂದಾಜು ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ.
ಹೇಗಾಯ್ತು ಘಟನೆ?
ತಿಲಕನಗರದ 3ನೇ ಅಡ್ಡರಸ್ತೆಯಲ್ಲಿ ಸುವರ್ಣಾ ಅವರ ಮನೆಯಿದೆ. ತಮ್ಮ ಮೊಮ್ಮೊಗನನ್ನು ಕರೆದುಕೊಂಡು ಸ್ನೇಹಿತೆಯೊಬ್ಬರ ಮನೆಗೆ ತೆರಳುತ್ತಿದ್ದರು.
ಇದನ್ನೂ ಓದಿ | ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ಬೈಕ್‌ನಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ
ತಿಲಕನಗರದ 4ನೇ ಕ್ರಾಸ್‍ನಲ್ಲಿ ನಡೆದು ಹೋಗುತ್ತಿದ್ದಾಗ, ಎದುರಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು, ಸುವರ್ಣಾ ಅವರ ಕೊಳಗೆ ಕೈ ಹಾಕಿ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ.
ಇದನ್ನೂ ಓದಿ | ಮಹಿಳೆಯರೆ ಎಚ್ಚರ, ಕೊರಳಲ್ಲಿರುವ ಸರ, ಮಾಂಗಲ್ಯ ಭದ್ರ, ನಗರಕ್ಕೆ ಮತ್ತೆ ಬಂತಾ ಪಲ್ಸರ್ ಗ್ಯಾಂಗ್?
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ವಿನೋಬನಗರ ಠಾಣೆ ಇನ್ಸ್ ಪೆಕ್ಟರ್, ಜಯನಗರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200