ಶಿವಮೊಗ್ಗದ ಮಹಿಳೆಯರೆ ಹುಷಾರ್‌, ದಾಖಲಾಯ್ತು ಮತ್ತೊಂದು ಕೇಸ್‌

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಕೆಲವು ದಿನದಿಂದ ಮತ್ತೆ ಚಿನ್ನದ ಸರ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯೊಬ್ಬರು ಶಾಪಿಂಗ್‌ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅರ್ಧ ಭಾಗ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಂಗೀತಾ ಎಂಬುವವರು ಗೋಪಾಳದಲ್ಲಿ ಶಾಪಿಂಗ್‌ ಮುಗಿಸಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕಂಡು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಎದುರು ರಸ್ತೆಯಲ್ಲಿ ಮತ್ತೊಂದು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ, ಸಂಗೀತಾ ಅವರ ಕೊರಳಿಗೆ ಕೈ ಹಾಕಿದ್ದಾನೆ. ಅವರ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸರ ಹಿಡಿದು, ಗಾಡಿಯಿಂದ ಬಿದ್ದರು

ತಕ್ಷಣ ಸಂಗೀತಾ ಅವರು ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದು ಆಯಾತಪ್ಪಿ ತಮ್ಮ ಬೈಕಿನಿಂದ ಬಿದ್ದಿದ್ದಾರೆ. ಈ ಸಂದರ್ಭ ಅವರ ಮಾಂಗಲ್ಯ ಸರ ತುಂಡಾಗಿದೆ. 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರದ ಪೈಕಿ 6 ಗ್ರಾಂ ಸರ ಸಂಗೀತಾ ಅವರ ಕೈಯಲ್ಲಿ ಉಳಿದಿದ್ದು, 4 ಗ್ರಾಂನಷ್ಟು ಸರವನ್ನು ಕಳ್ಳ ಕಸಿದುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

Crime-News-General-Image

ಇದನ್ನೂ ಓದಿ » ತಾಯಿ ಜೊತೆ ಬೈಕ್‌ನಲ್ಲಿ ತೆರಳುವಾಗ ಜೋರಾಗಿ ಕೂಗಿದ ಬಾಲಕಿ, ನಿಲ್ಲಿಸಿ ನೋಡಿದಾಗ ಕಾದಿತ್ತು ಆಘಾತ

ಘಟನೆಯಲ್ಲಿ ಸಂಗೀತಾ ಅವರು ಗಾಯಗೊಂಡಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ » ಸೂಳೆಬೈಲಿನ ಮನೆಯಲ್ಲಿ ಬೆಂಕಿ, ಸ್ಥಳೀಯರಲ್ಲಿ ಆತಂಕ, ತಪ್ಪಿದ ಅನಾಹುತ

Leave a Comment