ಶಿವಮೊಗ್ಗ: ಟೊಯೋಟಾ ಕಾರು ಮಾರಾಟ ಮಾಡಿ, ಅದರ ಹಳೇ ತೆರಿಗೆ ಬಾಕಿಯನ್ನು ಪಾವತಿಸದೆ ಖರೀದಿದಾರರಿಗೆ ವಂಚಿಸಲಾಗಿದೆ (cheated). ಶಿವಮೊಗ್ಗದ ನಿವಾಸಿ ಸೈಯದ್ ಅಫ್ರೋಜ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ.
ಸೈಯದ್ ಅಫ್ರೋಜ್ ಅವರು ಟೊಯೋಟ ಕಾರು ಖರೀದಿಸಿದ್ದರು. ವಾಹನ ವರ್ಗಾವಣೆಗಾಗಿ ಆರ್‌ಟಿಒ ಕಚೇರಿಗೆ ಹೋದಾಗ, ಕಾರಿನ ಮೇಲೆ ಹಳೇ ಟ್ಯಾಕ್ಸ್ ಬಾಕಿ ಇರುವುದು ಮತ್ತು ವಾಹನವನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾರಾಟಗಾರರನ್ನು ಕೇಳಿದಾಗ, ಅವರು ತೆರಿಗೆ ಹಣ ಕಟ್ಟುವುದಾಗಿ ನಂಬಿಸಿ ಕಾಲಹರಣ ಮಾಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಧಗಧಗ ಹೊತ್ತಿ ಉರಿದ ಡಸ್ಟರ್ ಕಾರು, ತಪ್ಪಿದ ಅನಾಹುತ, ಆಗಿದ್ದೇನು?
ತೆರಿಗೆ ಪಾವತಿಸದ ಕಾರಣ ವಾಹನದ ಎಫ್‌ಸಿ ಕೂಡ ಮುಗಿದು ಹೋಗಿದೆ. ಇದರಿಂದ ಸೈಯದ್ ಅಫ್ರೋಜ್ ಸಂಕಷ್ಟಕ್ಕೀಡಾಗಿದ್ದರು. ಕಾರು ಮಾರಾಟ ಮಾಡಿದವರು ಸಮಸ್ಯೆ ಬಗೆಹರಿಸುವುದಾಗಿ ಕಾಲಹರಣ ಮಾಡುತ್ತಿದ್ದರಿಂದ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

