ಶಿವಮೊಗ್ಗ ಲೈವ್.ಕಾಂ | SAGARA NEWS | 24 ಆಗಸ್ಟ್ 2021
ಅನ್ನ ಮಾಡುವ ವಿಚಾರವಾಗಿ ಅತ್ತೆ, ಸೊಸೆ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಸೊಸೆ ಬಿಸಿ ಬಿಸಿ ಅನ್ನದ ತಿಳಿಯನ್ನು ಅತ್ತೆ ತಲೆ ಮೇಲೆ ಸುರಿದಿದ್ದಾಳೆ. ಸುಟ್ಟ ಗಾಯಗಳಿಂದಾಗಿ ಅತ್ತೆ ಆಸ್ಪತ್ರೆ ಸೇರಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರ ತಾಲೂಕು ಮುಳಕೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪಾರ್ವತಮ್ಮ (58) ಅವರು ಸುಟ್ಟ ಗಾಯಗಳಿಂದಾಗಿ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನ್ನ ಮಾಡುವ ವಿಚಾರದಲ್ಲಿ ಕಿರಿಕ್
ಪಾರ್ವತಮ್ಮ ಅವರ ಸೊಸೆ ನೇತ್ರಾ ಅನ್ನಕ್ಕೆ ಇಟ್ಟಿದ್ದರು. ಇದನ್ನು ಗಮನಿಸಿದ ಪಾರ್ವತಮ್ಮ ಅವರು ತಾವು ಅನ್ನ ಮಾಡಿದ್ದು, ಮತ್ತೊಮ್ಮೆ ಯಾಕೆ ಇಟ್ಟಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಾರ್ವತಮ್ಮ ಮತ್ತು ನೇತ್ರಾ ಮಧ್ಯೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸಿಟ್ಟಾದ ನೇತ್ರಾ, ಒಲೆ ಮೇಲೆ ಇರಿಸಿದ್ದ ಅನ್ನದ ಪಾತ್ರೆಯನ್ನು ತಂದು ಅದರಲ್ಲಿದ್ದ ಬಿಸಿ ಅನ್ನದ ತಿಳಿಯನ್ನು ಪಾರ್ವತಮ್ಮ ಮೇಲೆ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಅನ್ನದ ಪಾತ್ರೆಯಲ್ಲೇ ಗುದ್ದಿದಳು
ಬಿಸಿ ತಿಳಿಯನ್ನು ತಲೆ ಮೇಲಿಂದ ಸುರಿಯುತ್ತಿದ್ದಂತೆ ಪಾರ್ವತಮ್ಮ ಅವರು ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ನೇತ್ರಾ ಅನ್ನ ಪಾತ್ರೆಯಿಂದಲೇ ಅತ್ತೆ ಪಾರ್ವತಮ್ಮಗೆ ತಲೆ ಮತ್ತು ಬೆನ್ನಿಗೆ ಗುದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಪಾರ್ವತಮ್ಮ ಅವರ ಮಕ್ಕಳು ಮತ್ತು ಸ್ಥಳೀಯರು ಬಂದು ರಕ್ಷಿಸಿದ್ದಾರೆ.
ಕೂಡಲೆ ಪಾರ್ವತಮ್ಮ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಪಾರ್ವತಮ್ಮ ಅವರ ಮುಖ, ಕಣ್ಣುಗಳು, ಕೈಗಳು ಸೇರಿದಂತೆ ವಿವಿಧೆಡೆ ಸುಟ್ಟ ಗಾಯವಾಗಿದೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200