ಕುಡಿಯುವ ನೀರಿನ ಪೈಪ್ ವಿಚಾರವಾಗಿ ಕಿರಿಕ್, ಎರಡು ಕುಟುಂಬದಿಂದ ದೂರು, ಪ್ರತಿದೂರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022

ನಲ್ಲಿ ನೀರಿನ ಪೈಪ್ ವಿಚಾರವಾಗಿ ಎರಡು ಕುಟುಂಬದ ನಡುವೆ ಜಗಳವಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎರಡು ಕುಟುಂಬದವರು ದೂರು, ಪ್ರತಿದೂರು ದಾಖಲಿಸಿದ್ದಾರೆ.

shimoga nanjappa hospital cancer treatment

ಹೊಸಮನೆ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಓಡಾಡುವ ದಾರಿಯಲ್ಲಿ ನೀರಿನ ಪೈಪ್ ಹಾಕಿದ್ದ ವಿಚಾರವಾಗಿ ಗಲಾಟೆ ಶುರುವಾಗಿದೆ.

ಮಾತಿಗೆ ಮಾತು ಬೆಳೆದು ಎರಡು ಕುಟುಂಬದವರ ಮಧ್ಯೆ ನೂಕಾಟ, ತಳ್ಳಾಟವಾಗಿದೆ. ಸುನಿಲ್ ರಾವ್ ಎಂಬುವವರು ದರ್ಶನ್, ಚೇತನ್, ಚಂದ್ರಮತಿ ಅವರ ವಿರುದ್ಧ ದೂರು ನೀಡಿದ್ದಾರೆ. ಗಲಾಟೆ ವೇಳೆ ಎದೆಗೆ ಗುದ್ದಿದ್ದಾರೆ. ಇದರಿಂದ ತಾವು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ ಚಂದ್ರಮತಿ ಅವರು ದೂರು ನೀಡಿದ್ದು, ಸುನಿಲ್ ರಾವ್ ಮತ್ತು ಅವರ ಪತ್ನಿ ತಳ್ಳಿದರಿಂದ ಮೊಣಕಾಲಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ರಾತ್ರೋರಾತ್ರಿ ಕೋಟೆ ದೇವಸ್ಥಾನದ ಹುಂಡಿ ಕಳವು

Shimoga Live News Age Wise Reach

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment