ಶಿವಮೊಗ್ಗ ಲೈವ್
ಶಿವಮೊಗ್ಗ: ಪೆಸೆಟ್ ಕಾಲೇಜು ಬಸ್ (College Bus) ಅಡ್ಡಗಟ್ಟಿ ಚಾಲಕನಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಸೆಟ್ (PESIT) ಕಾಲೇಜು ಬಸ್ ಚಾಲಕ ಹುಚ್ಚರಾಯ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿನೋಬನಗರ ಆಟೋ ನಿಲ್ದಾಣದ ಬಳಿ ಪೆಸೆಟ್ ಕಾಲೇಜು ಬಸ್ ಅಡ್ಡಗಟ್ಟಿ ಚಾಲಕನಿಗೆ ನಿಂದಿಸಿದ್ದಾರೆ. ಬಸ್ಸು ಉಷಾ ನರ್ಸಿಂಗ್ ಹೋಂ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಮೂವರು ಪುನಃ ಅಡ್ಡಗಟ್ಟಿ ಚಾಲಕ ಹುಚ್ಚರಾಯನನ್ನು ಕೆಳಗಿಳಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?

ಇದನ್ನೂ ಓದಿ » ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.