ಹರಿಗೆ ಸಮೀಪ ಕಾಮಗಾರಿ ಸ್ಥಳದಲ್ಲಿ ಲಕ್ಷ ಲಕ್ಷ ಮೌಲ್ಯದ 150 ಮೀಟರ್‌ ಕೇಬಲ್‌ ಕಟ್‌

SHIVAMOGGA LIVE NEWS | 30 NOVEMBER 2023

ಸುದ್ದಿಯ ಮುಂದಿನ ಭಾಗ ಕೆಳಗಿದೆ

SHIMOGA : ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಕೆ ಕಾಮಗಾರಿ ಸ್ಥಳದಲ್ಲಿ ಲಕ್ಷಾಂತರ ಮೌಲ್ಯದ ಕಾಪರ್‌ ಕಂಡಕ್ಟರ್‌ ಅರ್ಥಿಂಗ್‌ ಕೇಬಲ್‌ (cable) ಕಟ್‌ ಮಾಡಿ ಕಳವು ಮಾಡಲಾಗಿದೆ. ಶಿವಮೊಗ್ಗದ ಹರಿಗೆ ಸಮೀಪದ ಎಂಆರ್‌ಎಸ್‌ ಕ್ವಾರ್ಟರ್ಸ್‌ ಬಳಿ ಘಟನೆ ಸಂಭವಿಸಿದೆ.

Shimoga-City-MRS-Drone-Shot
Nanjappa Hospital Advertisement

ಕೆಪಿಟಿಸಿಎಲ್‌ ಮೂಲಕ ಅಂಡರ್‌ ಗ್ರೌಂಡರ್‌ ಕೇಬಲ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಕಾಪರ್‌ ಕಂಡಕ್ಟರ್‌ ಅರ್ಥಿಂಗ್‌ ಕೇಬಲ್‌ ಅಳವಡಿಸಲಾಗಿತ್ತು. ಇನ್ನೂ ಕೇಬಲ್‌ ಹಾಕುವುದು ಬಾಕಿ ಇದ್ದಿದ್ದರಿಂದ ಹೆಚ್ಚುವರಿ ಅರ್ಥಿಂಗ್‌ ಕೇಬಲ್‌ ಅನ್ನು  ಮುಚ್ಚದೆ ಹಾಗೆ ಬಿಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮರುದಿನ ಬೆಳಗೆ ಕೆಲಸಗಾರರು ಕಾಮಗಾರಿ ಸ್ಥಳಕ್ಕೆ ಹೋದಾಗ ಸುಮಾರು 150 ಮೀಟರ್‌ನಷ್ಟು ಅರ್ಥಿಂಗ್‌ ಕೇಬಲ್‌ (cable) ಅನ್ನು ಕಟ್‌ ಮಾಡಲಾಗಿತ್ತು. ಇದರ ಮೌಲ್ಯ 3.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆ, ಕಲಾ ತಂಡಗಳ ವಾದ್ಯಕ್ಕೆ ಭರ್ಜರಿ ಡಾನ್ಸ್

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment