ಕರೋನಾ ಭೀತಿಯಲ್ಲಿ ಕಾಲುವೆಗೆ ಹಾರಿದ ವ್ಯಕ್ತಿ, ಚೈನಾ ಗೇಟ್ ಬಳಿ ಮಧ್ಯಾಹ್ನ ಸಿಕ್ತು ಮೃತದೇಹ

ಶಿವಮೊಗ್ಗ ಲೈವ್.ಕಾಂ | KARGAL NEWS | 22 MAY 2021

ಕರೋನ ಭೀತಿಯಲ್ಲಿ ವ್ಯಕ್ತಿಯೊಬ್ಬರು ನೀರಿನ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ತಾಲೂಕು ಕಾರ್ಗಲ್ ಗ್ರಾಮದಲ್ಲಿ ಘಟನೆ ನಡೆದಿದೆ.

ಲಿಂಗೇಗೌಡ (68) ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿನ ಚೈನಾ ಗೇಟ್ ಬಳಿ ಕಾಲುವೆಗೆ ಹಾರಿದ್ದಾರೆ. ಲಿಂಗೇಗೌಡ ಅವರ ಮೃತದೇಹ ಮಧ್ಯಾಹ್ನ ಪತ್ತೆಯಾಗಿದ್ದು, ಸಾಗರದ ಆಸ್ಪತ್ರೆಗೆ ರವಾನಿಸಲಾಗಿದೆ.

ಲಿಂಗೇಗೌಡ ಅವರಿಗೆ ಕಳೆದ ಮೂರ್ನಾಲ್ಕು ದಿನದಿಂದ ಆರೋಗ್ಯ ಸರಿ ಇರಲಿಲ್ಲ.  ಈ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದರು. ಕರೋನ ಶಂಕೆ ಇದ್ದಿದ್ದರಿಂದ ಆತಂಕಗೊಂಡು ಕಾಲುವೆಗೆ ಹಾರಿರುವ ಶಂಕೆ ಇದೆ.

ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# Nation’s Biggest Offer Starts Midnight at shop.bigbazaar.com. Shop for ₹1500 & get ₹1000 Cashback! Be the first to shop! https://bit.ly/3v6Fu44

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment