ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 23 OCTOBER 2024 : ಶಾಲೆ, ಕಾಲೇಜು ಆವರಣದಿಂದ 100 ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ಮಂಗಳವಾರ ದಿಢೀರ್ ದಾಳಿ (Raid) ನಡೆಸಿದ್ದಾರೆ. ಜಿಲ್ಲೆಯಾದ್ಯಂತ 512 ಕಡೆ ದಂಡ ವಿಧಿಸಲಾಗಿದೆ. 5 ಕಡೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಪೆಟ್ಟಿ ಅಂಗಡಿ, ಬೇಕರಿ, ಜೆರಾಕ್ಸ್ ಶಾಪ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದರು. ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆ ದಂಡ ವಿಧಿಸಿದ್ದಾರೆ.
ಎಲ್ಲೆಲ್ಲಿ ದಂಡ ವಿಧಿಸಲಾಗಿದೆ? RAID
ಶಿವಮೊಗ್ಗ ತಾಲೂಕಿನ ಎರಡು ಉಪ ವಿಭಾಗಗಳಲ್ಲಿ 285 ಕಡೆ ದಂಡ ವಿಧಿಸಲಾಗಿದೆ. ಭದ್ರಾವತಿ ಉಪ ವಿಭಾಗದಲ್ಲಿ 94, ಸಾಗರ 11, ಶಿಕಾರಿಪುರ 71, ತೀರ್ಥಹಳ್ಳಿ ಉಪ ವಿಭಾಗದಲ್ಲಿ 51 ಕಡೆ ದಂಡ ವಿಧಿಸಿದ್ದಾರೆ. ಭದ್ರಾವತಿ ಉಪ ವಿಭಾಗದಲ್ಲಿ 3 ಕಡೆ, ತೀರ್ಥಹಳ್ಳಿ ಉಪ ವಿಭಾಗದಲ್ಲಿ 2 ಕಡೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿದ ಶಿಕ್ಷಕಿ, 24 ಗಂಟೆ ಬಳಿಕ ಕಾದಿತ್ತು ಶಾಕ್