ಶಿವಮೊಗ್ಗದ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ 12 ಲಕ್ಷ ಬಹುಮಾನ, ಮುಂದೆ ಕಾದಿತ್ತು ಫಜೀತಿ, ಏನಿದು ಕೇಸ್‌?

ಶಿವಮೊಗ್ಗ: ಕೇರಳ ಲಾಟರಿ (Kerala Lottery) ಬಹುಮಾನ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ.

12 ಲಕ್ಷ ಬಹುಮಾನ..!

ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ಮೂಲಕ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಮೆಸೇಜ್‌ ಕಳುಹಿಸಿದ್ದರು. ಕೇರಳ ಲಾಟರಿಯಲ್ಲಿ ತಮಗೆ 12 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿದ್ದರು. ಲಾಟರಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ತೆರಿಗೆ ಮತ್ತು ಇತರ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದರು. ಇದಕ್ಕಾಗಿ ಅವರು ವಿವಿಧ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಕಳುಹಿಸಿಕೊಟ್ಟಿದ್ದರು.

Shivamogga-CEN-Police-Station

Shivamogga-Cyber-Crime-police-station

ನಂಬಿ ಹಣ ಹಾಕಿ ಮೋಸ ಹೋದರು

ಲಾಟರಿಯಲ್ಲಿ ಬಹುಮಾನ ಬಂದಿರುವುದು ನಿಜವೆಂದು ನಂಬಿದ ವ್ಯಕ್ತಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು ₹1,84,296 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಸ್ಕ್ಯಾನ್ ಮಾಡಿ ಪಾವತಿಸಿದ್ದಾರೆ. ಹಣ ಪಡೆದ ನಂತರವೂ ಲಾಟರಿ ಮೊತ್ತ ನೀಡದೆ ಇದ್ದಾಗ ಶಿವಮೊಗ್ಗದ ವ್ಯಕ್ತಿಗೆ ಅನುಮಾನ ಬಂದಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಯುವಕನ ತಲೆಯಲ್ಲಿ ಸಿಲುಕಿದ ಮಚ್ಚು, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಏನಿದು ಕೇಸ್‌?

ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment