BREAKING NEWS – ಶಿವಮೊಗ್ಗದ ಮನೆಯಲ್ಲಿ ಸಿಲಿಂಡರ್ ಸ್ಪೋಟ, ಹಾರಿ ಹೋದ ಛಾವಣಿ

ಶಿವಮೊಗ್ಗ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Cylinder) ಸ್ಪೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಸ್ಪೋಟದ ಶಬ್ದಕ್ಕೆ ನೆರೆಹೊರೆಯ ನಿವಾಸಿಗಳು ಅಂತಕಕ್ಕೀಡಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 32 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ » ಮಿನಿಸ್ಟರ್‌ ವಿಡಿಯೋ ತಿರುಚಿದ್ದಕ್ಕೆ ಆಕ್ರೋಶ, ಸಿಗಂದೂರು ಚೌಡೇಶ್ವರಿದೇವಿ ಭಕ್ತ ಮಂಡಳಿಯಿಂದ ದೂರು

230725-Cylinder-incident-at-sharavathi-nagara.webp

ಶಿವಮೊಗ್ಗದ ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಾಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಪಕ್ಕದ ಓಣಿಯಲ್ಲಿದ್ದ ಪೀರಾನ್ ಸಾಬ್ ಎಂಬುವವರ ಮನೆಯಲ್ಲಿ ಇಂದು ಸಂಜೆ ಸಿಲಿಂಡರ್ ಸ್ಪೋಟಗೊಂಡಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

230725-Cylinder-incident-at-sharavathi-nagara.webp

ಮನೆಯಲ್ಲಿದ್ದ ಎಂ.ಬಿ.ಪೀರಾನ್ ಸಾಬ್, ಅವರ ಪತ್ನಿ ಸಾಹೇರಾ, ಸೊಸೆ ಜಯೇಬಾ ಗಾಯಗೊಂಡಿದ್ದಾರೆ. ಕೂಡಲೆ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯ ಛಾವಣಿ ಹಾರಿ ಹೋಗಿದೆ. ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ.

ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Cylinder Incident

Cylinder Incident

June-2025-Report-Shivamogga-Live-New-New.

Leave a Comment