ಶಿವಮೊಗ್ಗದ ಮೂರು ಕಡೆ ಡಿಸಿಐಬಿ ಪೊಲೀಸ್ ದಾಳಿ, ಜೂಜು, ಮಟ್ಕಾ ಆಡಿಸುತ್ತಿದ್ದವರು ಅರೆಸ್ಟ್, ಎಲ್ಲೆಲ್ಲಿ ದಾಳಿಯಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 07 JANUARY 2021

ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಗಳ ಮೇಲೆ ಶಿವಮೊಗ್ಗ ಡಿಸಿಐಬಿ ತಂಡ ದಾಳಿ ನಡೆಸಿದೆ. ಮೂರು ಪ್ರಕರಣ ದಾಖಲು ಮಾಡಿಕೊಂಡು 61 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಎಲ್ಲೆಲ್ಲಿ, ಯಾರ ಮೇಲೆ ದಾಳಿಯಾಯ್ತು?

ಕೇಸ್ 1 – ಜಯನಗರ ಪೊಲೀಸ್ ಠಾಣೆ

ಸ್ಥಳ – ಲಕ್ಷ್ಮಿ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳ

ಆರೋಪಿ – ಹೊಸಮನೆಯ ಹರೀಶ್ (33)

ವಶ ಪಡೆದುಕೊಂಡಿದ್ದು – 18,180 ರೂ. ಹಣ, ಓಸಿಗೆ ಸಂಬಂಧಿಸಿದ ದಾಖಲೆಗಳು ವಶಕ್ಕೆ.

ಕೇಸ್ 2 –  ತುಂಗಾನಗರ ಪೊಲೀಸ್ ಠಾಣೆ

ಸ್ಥಳ – ಗಾಜನೂರು ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳ

ಆರೋಪಿ – ಗಾಜನೂರಿನ ಮಂಜುನಾಥ ಅಲಿಯಾಸ್ ಬ್ರಿಷ್ಟಾಲ್ (30)

ವಶ ಪಡೆದುಕೊಂಡಿದ್ದು – 21,450 ರೂ. ನಗದು, ಓಸಿ ಗೆ ಸಂಬಂಧಿಸಿದ ದಾಖಲೆಗಳು ವಶಕ್ಕೆ

ಕೇಸ್ 3 – ದೊಡ್ಡಪೇಟೆ ಪೊಲೀಸ್ ಠಾಣೆ

ಸ್ಥಳ – ಮಂಜುನಾಥ ಬಡಾವಣೆಯ ಸಾರ್ವಜನಿಕ ಸ್ಥಳ

ಆರೋಪಿ – ಮಂಜುನಾಥ ಬಡಾವಣೆಯ ಆಸೀಫ್ (32)

ವಶ ಪಡೆದುಕೊಂಡಿದ್ದು – 21,750 ರೂ. ನಗದು, ಓಸಿ ಗೆ ಸಂಬಂಧಿಸಿದ ದಾಖಲೆಗಳು ವಶಕ್ಕೆ.

ಡಿಸಿಐಬಿ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ, ಸಿಬ್ಬಂದಿಗಳಾದ ಹೆಚ್.ಸಿ ಸತೀಶ್ ರಾಜ್, ಹಾಲಪ್ಪ ಹಾಗೂ ಪಿ.ಸಿ. ಚಂದ್ರಾನಾಯ್ಕ್, ಸಮೀವುಲ್ಲಾ ಮತ್ತು ವಸಂತ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್  shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment