ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021
ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಸುಗಳಲ್ಲಿ ಡಿಸೇಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಡಿಸೇಲ್ ಟ್ಯಾಂಕ್’ನ ಕ್ಯಾಪ್ ತೆಗೆದು 580 ಲೀಟರ್ ಡಿಸೇಲ್ ಕಳುವು ಮಾಡಲಾಗಿದೆ. ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ ಕಳ್ಳರು ತಮ್ಮ ಕರಾಮತ್ತು ತೋರಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಗಾಯ್ತು ಘಟನೆ?
ಶಿವಮೊಗ್ಗ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ಘಟನೆ ಸಂಭವಿಸಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್’ಗಳನ್ನು ರಾತ್ರಿ ತಂದು ನಿಲ್ಲಿಸಲಾಗಿತ್ತು. ಬೆಳಗ್ಗೆ ಚಾಲಕ ಬಂದು ಪರಿಶೀಲಿಸಿದಾಗ ಡಿಸೇಲ್ ಟ್ಯಾಂಕ್’ಗಳ ಕ್ಯಾಪ್ ಓಪನ್ ಆಗಿರುವುದು ಬೆಳಕಿಗೆ ಬಂದಿದೆ.
ಎರಡು ಬಸ್ಸುಗಳಲ್ಲಿ ತಲಾ 90 ಲೀಟರ್, ಒಂದು ಬಸ್ಸಿನಲ್ಲಿ ಅಂದಾಜು 250 ಲೀಟರ್, ಮತ್ತೊಂದರಲ್ಲಿ ಸುಮಾರು 150 ಲೀಟರ್ ಡಿಸೇಲ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. 55,454 ರೂ. ಮೌಲ್ಯದ 580 ಲೀಟರ್ ಡಿಸೇಲ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೈತ್ರಿ ಅಪಾರ್ಟ್’ಮೆಂಟ್’ನಲ್ಲಿ ರಾತ್ರಿ ವೇಳೆ ಸೆಕ್ಯೂರಿಟಿಗಳಿದ್ದರೂ ಕಳ್ಳತನವಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ವಿನೋಬನಗರ ಠಾಣೆಗೆ ದೂರು ನೀಡಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200