ಶಿವಮೊಗ್ಗ: ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು ಈ ಕುರಿತು ತನಿಖೆ ನಡೆಸಬೇಕು, 45 ದಿನ ನಿಮ್ಮನ್ನು ಅರೆಸ್ಟ್ (Digital Arrest) ಮಾಡಬೇಕು ಎಂದು ಬೆದರಿಸಿ ಶಿವಮೊಗ್ಗದ ಶಿಕ್ಷಕಿಯೊಬ್ಬರಿಗೆ ₹22.20 ಲಕ್ಷ ವಂಚಿಸಲಾಗಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದ ಶಿಕ್ಷಕಿಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಸಿಮ್ ಬ್ಲಾಕ್ ಮಾಡಲಾಗುತ್ತಿದೆ. ಕೂಡಲೆ ಮುಂಬೈ ಪೊಲೀಸರಿಗೆ ವಾಟ್ಸಪ್ ಕರೆ ಮಾಡಿ ಎಂದು ನಂಬರ್ ನೀಡಿದ್ದ. ಆತಂಕಗೊಂಡ ಶಿಕ್ಷಕಿ ವಾಟ್ಸಪ್ ಕರೆ ಮಾಡಿದಾಗ ಮುಂಬೈನ ಕೊಲಾಬಾದ ಸಬ್ ಇನ್ಸ್ಪೆಕ್ಟರ್ ವಿಜಯ್ ಖನ್ನಾ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದ. ‘ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಈ ಸಂಬಂಧ ನಿಮ್ಮನ್ನು 45 ದಿನ ಬಂಧಿಸಬೇಕಾಗುತ್ತದೆʼ ಎಂದು ಹೆದರಿಸಿ ಆನ್ಲೈನ್ನಲ್ಲಿ ವಿಚಾರಣೆ ಎದುರಿಸುವಂತೆ ತಿಳಿಸಿದ್ದ.
ಸ್ವಲ್ಪ ಸಮಯದ ಬಳಿಕ ಡಿಸಿಪಿ ಸಿಂಗ್ ಎಂಬಾತ ವಿಡಿಯೋ ಕರೆ ಮೂಲಕ ಶಿವಮೊಗ್ಗದ ಶಿಕ್ಷಕಿಯ ವಿಚಾರಣೆ ನಡೆಸಿದ್ದ. ‘ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ. ವಿಚಾರಣೆ ಮುಗಿದ ಮೇಲೆ ನೀವು ನಿರಪರಾಧಿ ಎಂದು ಕಂಡು ಬಂದರೆ ನಿಮ್ಮ ಹಣ ಹಿಂತಿರುಗಿಸುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನ ಬಂಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದ. ಹೆದರಿದ ಶಿಕ್ಷಕಿ ₹22.20 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದರು.
ಹಣ ವರ್ಗಾವಣೆ ನಂತರ ಕರೆ ಬಾರದೆ ಇದ್ದಾಗ ಅನುಮಾನಗೊಂಡು ಶಿಕ್ಷಕಿಯೇ ಆ ನಂಬರ್ಗೆ ಕರೆ ಮಾಡಿದ್ದರು. ಆಗ ಆ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬಂದಿತ್ತು. ಈ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಕರ್ನಾಟಕದಲ್ಲಿ ಮುಂದುವರೆದ ಮಳೆ, ಶಿವಮೊಗ್ಗ ಜಿಲ್ಲೆಗೆ ಇವತ್ತೂ ಅಲರ್ಟ್ – ಹವಾಮಾನ ವರದಿ
Digital Arrest
LATEST NEWS
- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

About The Editor
ನಿತಿನ್ ಆರ್.ಕೈದೊಟ್ಲು




