ವಿಡಿಯೋ ಕರೆಯಲ್ಲೆ ಶಿವಮೊಗ್ಗದ ವ್ಯಕ್ತಿ ಅರೆಸ್ಟ್‌, ಹುಷಾರ್‌ ಮುಂದಿನ ಟಾರ್ಗೆಟ್‌ ನೀವೆ, ಏನಿದು ಕೇಸ್‌?

ಶಿವಮೊಗ್ಗ: ಡಿಜಿಟಲ್‌ ಅರೆಸ್ಟ್‌ (Digital Arrest) ಮಾಡಿ ಜನರಲ್ಲಿ ಆತಂಕ ಮೂಡಿಸಿ ಹಣ ವಸೂಲಿ ಮಾಡುತ್ತಿದ್ದ ಆನ್‌ಲೈನ್‌ ವಂಚಕರು ಈಗ ವಂಚನೆಯ ಸ್ವರೂಪ ಬದಲಿಸಿದ್ದಾರೆ. ವಿಡಿಯೋ ಕಾಲ್‌ನಲ್ಲೇ ಅರೆಸ್ಟ್‌ ಮಾಡಿ, ವಿಡಿಯೋ ಕಾಲ್‌ನಲ್ಲೇ ಬೇಲ್‌ ಕೊಡಿಸಿ ಹಣ ಪಡೆದು ವಂಚಿಸುತ್ತಿದ್ದಾರೆ. ಇಂತಹುದೇ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹19 ಲಕ್ಷ ವಂಚಿಸಲಾಗಿದೆ.

ಟಾರ್ಗೆಟ್‌ ಆದ ನಿವೃತ್ತ ಉದ್ಯೋಗಿ

ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರನ್ನು ಗುರಿಯಾಗಿಸಿ ವಾಟ್ಸಪ್‌ನಲ್ಲಿ ವಿಡಿಯೋ ಕಾಲ್‌ ಮಾಡಲಾಗಿದೆ. ಮುಂಬೈನ ಕೊಲಾಬ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಶಿಖಾವತ್‌ ಎಂದು ಆತ ಪರಿಚಿಯಿಸಿಕೊಂಡಿದ್ದ. ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ಹಾಗಾಗಿ ಈ ಕೂಡಲೆ ಅರೆಸ್ಟ್‌ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.

ವಿಡಿಯೋ ಕಾಲ್‌ನಲ್ಲೆ ಜಾಮೀನು

SMS-Fraud-Shimoga-CEN-Police-Station.

ಮರುದಿನ ಪುನಃ ವಿಡಿಯೋ ಕಾಲ್‌ ಮಾಡಿ ನ್ಯಾಯಾಲಯದಲ್ಲಿ ನಿಮಗೆ ಜಾಮೀನು ಕೊಡಿಸುತ್ತೇವೆ ಎಂದು ನಂಬಿಸಿದ್ದ. ಮತ್ತೊಂದು ವಿಡಿಯೋ ಕರೆಯಲ್ಲಿ ಕೋರ್ಟ್‌ ಮಾದರಿ ಹಿನ್ನಲೆ, ನ್ಯಾಯಾಧೀಶರೊಬ್ಬರು ಕುಳಿತಿರುವಂತಿತ್ತು. ನ್ಯಾಯಾಧೀಶನಂತಿದ್ದ ವ್ಯಕ್ತಿ ಶಿವಮೊಗ್ಗದ ನಿವೃತ್ತ ಉದ್ಯೋಗಿಯ ಮಾಹಿತಿ ಕೇಳಿದ. ತದನಂತರ ₹19 ಲಕ್ಷ ಕೊಡಬೇಕು ಎಂದು ಬೆದರಿಸಿದ್ದಾರೆ. ಆತಂಕದಲ್ಲಿ ನಿವೃತ್ತ ಉದ್ಯೋಗಿಯು ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲ ಪಡೆದು ವಂಚಕರು ಹೇಳಿದ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಕೊನೆಗೆ ತಾವು ಮೋಸ ಹೋಗಿರುವ ಅರಿವಾಗಿದ್ದು ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Kalleshwara-Enterprises.webp

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗಕ್ಕೆ ಮೂರು ಆನೆಗಳು ಆಗಮನ, ಪೂಜೆ, ಸ್ವಾಗತ, ಯಾವೆಲ್ಲ ಆನೆಗಳು ಬಂದಿವೆ?

Digital Arrest

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment