ತಡರಾತ್ರಿ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದ ಡಾಕ್ಟರ್‌ಗೆ ಕಾದಿತ್ತು ಆಘಾತ

SHIMOGA NEWS, 27 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಂದಿದ್ದ ವೈದ್ಯರೊಬ್ಬರ ಬೈಕ್‌ (Bike) ಕಳುವಾಗಿದೆ. ಶಿವಮೊಗ್ಗದ ಮೆಟ್ರೋ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳುವಾಗಿವೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಮೆಟ್ರೋ ಆಸ್ಪತ್ರೆ ವೈದ್ಯ ಪ್ರಮೋದ್‌ ಎಂಬುವವರು ಸರ್ವೋದಯ ಶಾಲೆ ಸಮೀಪ ಬೈಕ್‌ ನಿಲ್ಲಿಸಿದ್ದರು. ರಾತ್ರಿ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್‌ ಅವರು ಬೆಳಗಿನ ಜಾವ 3.30ರ ಹೊತ್ತಿಗೆ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಬಳಿಕ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ » ರೈಲ್ವೆ ಹಳಿ ಬಳಿ ಕತ್ತಲಲ್ಲಿ ಕಂಡರು ಇಬ್ಬರು, ಪ್ರಶ್ನಿಸಿದವರ ಮೇಲೆ ಮನಸೋಯಿಚ್ಛೆ ಹಲ್ಲೆ

Nanjappa Hospital Advertisement

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment