ಕರೆಂಟ್ ಬಿಲ್ ಕಟ್ಟಿ ಅಂತಾ ಬಂತು ಮೆಸೇಜ್, ಆ ನಂಬರ್ ಗೆ ಕರೆ ಮಾಡಿದ ಮೇಲೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 NOVEMBER 2022

SHIMOGA | ವಿದ್ಯುತ್ ಬಿಲ್ (electricity bill fraud) ಪಾವತಿ ಮಾಡುವಂತೆ ಬಂದ ಒಂದು ಮೆಸೇಜು, ವ್ಯಕ್ತಿಯೊಬ್ಬರ ಮೂರು ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷ ಲಕ್ಷ ಹಣ ಕಳೆದುಕೊಳ್ಳುವಂತೆ ಮಾಡಿದೆ.

ಶಿವಮೊಗ್ಗದ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ವಿದ್ಯುತ್ ಬಿಲ್ ಪಾವತಿಸುವಂತೆ ಬಂದ ಮೆಸೇಜಿನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿ, ಸಂಕಷ್ಟಕ್ಕೆ ಸಿಲುಕಿದ್ದಾರೆ. 5.36 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

Atiyas Motors Shimoga

(electricity bill fraud)

ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಹೋದರನ ಮೊಬೈಲ್ ಗೆ ಮೆಸೇಜ್

ಶಿವಮೊಗ್ಗದ ವ್ಯಕ್ತಿ, ತಮ್ಮ ಸಹೋದರನ ಮನೆಯ ವಿದ್ಯುತ್ ಬಿಲ್ ಅನ್ನು ಆನ್ ಲೈನ್ ಮೂಲಕ ಪಾವತಿ ಮಾಡುತ್ತಿದ್ದರು. ಈಚೆಗೆ ಸಹೋದರನ ಮೊಬೈಲ್ ಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಮೆಸೇಜ್ ಬಂದಿದೆ. ಇದನ್ನು ಸಹೋದರ, ಶಿವಮೊಗ್ಗದ ವ್ಯಕ್ತಿಯ ಮೊಬೈಲ್ ಗೆ ಕಳುಹಿಸಿದ್ದಾರೆ. ವಿಚಾರಿಸೋಣ ಎಂದು ಶಿವಮೊಗ್ಗದ ವ್ಯಕ್ತಿ ಮೆಸೇಜ್ ಕಳುಹಿಸಿದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾರೆ.

(electricity bill fraud)

ಮೂರು ಬ್ಯಾಂಕ್ ಖಾತೆಯಿಂದ ತಲಾ 2 ರೂ. ಟ್ರಾನ್ಸ್ ಫರ್ ಮಾಡುವಂತೆ ಸಲಹೆ

ಮೆಸೇಜ್ ಕಳುಹಿಸಿದ ವ್ಯಕ್ತಿಗೆ ಕರೆ ಮಾಡುತ್ತಿದ್ದಂತೆ ಆತ ಎನಿ ಡೆಸ್ಕ್ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಅದರಲ್ಲಿರುವ 9 ರೆಫರೆನ್ಸ್ ನಂಬರ್ ಪಡೆದುಕೊಂಡಿದ್ದಾನೆ. ಶಿವಮೊಗ್ಗದ ವ್ಯಕ್ತಿ ಬಳಿ ಇದ್ದ ಮೂರು ಬ್ಯಾಂಕ್ ಖಾತೆಯಿಂದ ತಲಾ 2 ರೂ.ಗಳನ್ನು ಕಳುಹಿಸುವಂತೆ ತಿಳಿಸಿದ್ದಾನೆ. ಕರೆ ಮಾಡಿದ ವ್ಯಕ್ತಿ ಹೇಳಿದಂತೆಯೇ ಶಿವಮೊಗ್ಗದ ವ್ಯಕ್ತಿ ಮಾಡಿದ್ದಾರೆ.

(electricity bill fraud)

ಕೆಲವೇ ಹೊತ್ತಿನಲ್ಲಿ 3 ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂ. ಮಂಗಮಾಯ

ಇದಾಗಿ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ವ್ಯಕ್ತಿಯ ಮೊಬೈಲ್ ಹ್ಯಾಕ್ ಆಗಿದೆ. ಕರೆ ಮಾಡಿದ್ದ ವ್ಯಕ್ತಿಯು ಶಿವಮೊಗ್ಗದ ವ್ಯಕ್ತಿಯ ಮೊಬೈಲನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದ್ದಾನೆ. ಬಳಿಕ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂ. ಮಾಯವಾಗಿದೆ. ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ 2.47 ಲಕ್ಷ ರೂ. ಯೂನಿಯನ್ ಬ್ಯಾಂಕ್ ಖಾತೆಯಿಂದ 1.48 ಲಕ್ಷ ರೂ. ಇಂಡಿಯನ್ ಬ್ಯಾಂಕ್ ಖಾತೆಯಿಂದ 1.41 ಲಕ್ಷ ರೂ. ಕಡಿತವಾಗಿದೆ. ಒಟ್ಟು 5.36 ಲಕ್ಷ ರೂ. ಹಣ ನಾಪತ್ತೆಯಾಗಿದೆ ಎಂದು ಶಿವಮೊಗ್ಗದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ | ಮೆಸೇಜ್ ತಂದ ಸಂಕಷ್ಟ, ದೂರು ದಾಖಲಿಸಿ, ತಲೆ ಮೇಲೆ ಕೈ ಹೊತ್ತು ಕುಳಿತ ರೈತ

ಈ ಸಂಬಂಧ ಅಜಯ್ ಕುಮಾರ್ ಶ್ರೀವಾತ್ಸವ ಎಂಬಾತನ ವಿರುದ್ಧ ಶಿವಮೊಗ್ಗದ ವ್ಯಕ್ತಿ ದೂರು ನೀಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್ ಲೈನ್ ವಂಚಕರ ಮಾಯಾ ಜಾಲಕ್ಕೆ ಬೀಳುವ ಮುನ್ನ

ಬಿಲ್ ಪಾವತಿ, ಬ್ಯಾಂಕ್ ಖಾತೆ ಮುಚ್ಚಲಾಗುತ್ತದೆ, ಎಟಿಎಂ ಅವಧಿ ಮುಗಿಯಿತು ಸೇರಿದಂತೆ ನಾನಾ ನೆಪಗಳನ್ನು ಇಟ್ಟುಕೊಂಡು, ವಂಚಕರು ಅಮಾಯಕರಿಗೆ ಬಲೆ ಬೀಸುತ್ತಿದ್ದಾರೆ. ಯಾವುದೊ ಆ್ಯಪ್ ಡೌನ್ ಲೌಡ್ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅವುಗಳನ್ನು ಬಳಸಿಕೊಂಡು ಹಣ, ಮೊಬೈಲ್ ನಲ್ಲಿರುವ ಡೇಟಾ ಕದಿಯುತ್ತಾರೆ. ಅನಾಮಧೇಯ ಆ್ಯಪ್ ಡೌನ್ ಲೋಡ್ ಮಾಡುವ ಮೊದಲು ಎಚ್ಚರ ವಹಿಸಬೇಕಾಗುತ್ತದೆ.

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 20, 2022

Leave a Comment