ದುಬೈನಿಂದ ಕಡಿಮೆ ಬೆಲೆಗೆ ಐ-ಫೋನ್‌, ಆಮಿಷ ಒಡ್ಡಿ ಮಹಿಳಾ ಇಂಜಿನಿಯರ್‌ಗೆ ಮೋಸ್‌, ಹೇಗಾಯ್ತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ದುಬೈನಿಂದ ಕಡಿಮೆ ಬೆಲೆಗೆ ಐಫೋನ್ ಕೊಡಿಸುವುದಾಗಿ ನಂಬಿಸಿ ಮಹಿಳಾ ಇಂಜಿನಿಯರ್ ಒಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮಹಿಳಾ ಇಂಜಿನಿಯರ್ ಒಬ್ಬರಿಗೆ ಇನ್‌ಸ್ಟಾಗ್ರಾಮ್ ಮೂಲಕ ಸುನಿಲ್ ಎಂಬಾತನ ಪರಿಚಯವಾಗಿತ್ತು. ಆತ ತಾನು ಕ್ರಷರ್ ಮಾಲೀಕನೆಂದು ಪರಿಚಯಿಸಿಕೊಂಡಿದ್ದ. ದುಬೈನಿಂದ ಕಡಿಮೆ ಬೆಲೆಗೆ ಐಫೋನ್ 17 ಪ್ರೋ ಮ್ಯಾಕ್ಸ್ ಮೊಬೈಲ್ ತರಿಸಿಕೊಡುವುದಾಗಿ ನಂಬಿಸಿದ್ದ.

Vinobanagara-Police-Station-Shimoga

ಆತನ ಮಾತು ನಂಬಿದ ಇಂಜಿನಿಯರ್, ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಿವಿಧ ಕಂತುಗಳಲ್ಲಿ ಒಟ್ಟು ₹1,34,000 ಹಣವನ್ನು ಆತನಿಗೆ ಆನ್‌ಲೈನ್ ಮೂಲಕ ಕಳುಹಿಸಿಕೊಟ್ಟಿದ್ದರು. ಆದರೆ, ಹಣ ಪಡೆದ ಬಳಿಕ ಆರೋಪಿ ಮೊಬೈಲ್ ಕೊಡಿಸದೆ ನಾನಾ ಸಬೂಬು ಹೇಳಿ ಸತಾಯಿಸಲು ಆರಂಭಿಸಿದ್ದ ಎಂದು ಆರೋಪಿಸಲಾಗಿದೆ.

ವಂಚನೆಗೊಳಗಾದ ಇಂಜಿನಿಯರ್ ತಮ್ಮ ಹಣ ವಾಪಸ್ ಕೇಳಿದಾಗ, ಆರೋಪಿಯು ಎರಡು ಕಂತುಗಳಲ್ಲಿ ಒಟ್ಟು ₹54,000 ಹಣವನ್ನು ಮಾತ್ರ ಹಿಂದಿರುಗಿಸಿದ್ದಾನೆ. ಇನ್ನುಳಿದ ₹80,000 ಹಣ ನೀಡದೆ ನಾನಾ ಕಾರಣಗಳನ್ನು ನೀಡುತ್ತಾ ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.