ಶಿವಮೊಗ್ಗದ ಮನೆಯಲ್ಲಿ ₹1.34 ಲಕ್ಷ ಮೌಲ್ಯದ ಶೂ, ಚಪ್ಪಲಿಗಳು ಕಳ್ಳತನ

ಶಿವಮೊಗ್ಗ: ಮನೆಯಲ್ಲಿನ ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳವು ಮಾಡುವುದು ಸಾಮಾನ್ಯ. ಆದರೆ, ನಗರದ ಅಲ್ ಹರೀಮ್ ಲೇಔಟ್‌ನ ಮನೆಯೊಂದರಲ್ಲಿ ಲಕ್ಷಗಟ್ಟಲೆ ಮೌಲ್ಯದ ಶೂಗಳು (Shoes) ಹಾಗೂ ಚಪ್ಪಲಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ನಗರದ ಅಲ್ ಹರೀಮ್ ಲೇಔಟ್‌ನ ಸಂಜಯ್ ಕಶ್ಯಪ್ ಅವರ ಮನೆಯ ಸ್ಲಿಪ್ಪರ್ ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ದುಬಾರಿ ಬೆಲೆಯ ಬ್ರಾಂಡ್‌ಗಳ ಶೂ ಹಾಗೂ ಚಪ್ಪಲಿಗಳನ್ನು ಕಳವು ಮಾಡಲಾಗಿದೆ. ₹16 ಸಾವಿರ ನೈಕಿ ಶೂ, ₹12 ಸಾವಿರದ ಫಿಲಾ ಬ್ಲ್ಯಾಕ್‌ ಹೈ ಶೂ, ಪೂಮಾ, ಅಡಿಡಾಸ್‌, ವುಡ್‌ ಲ್ಯಾಂಡ್‌ ಸೇರಿ ವಿವಿಧ ಬ್ರಾಂಡೆಂಡ್‌ ಶೂ ಮತ್ತು ಚಪ್ಪಲಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಒಟ್ಟು ₹1.34 ಲಕ್ಷ ಮೌಲ್ಯದ ಶೂ, ಚಪ್ಪಲಿಗಳು ಕಳುವಾಗಿವೆ ಎಂದು ಅಂದಾಜಿಸಲಾಗಿದೆ. ಜತೆಗೆ ಮನೆಯ ಟೆರೇಸ್‌ ಮೇಲೆ ಒಣಗಲು ಹಾಕಿದ್ದ ಎರಡು ಜತೆ ಬಟ್ಟೆಗಳು ಸಹ ಕಳವಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » 120 ಇನ್ಸ್‌ಪೆಕ್ಟರ್‌ಗಳು ವರ್ಗ, ಶಿವಮೊಗ್ಗಕ್ಕೆ ರಾಘವೇಂದ್ರ ಕಂಡಿಕೆ ವಾಪಸ್‌, ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ?

Tunga-Nagara-Police-Station-Shimoga

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment