ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ದಂಪತಿ ಸೇರಿ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

SHIVAMOGGA LIVE NEWS | 9 JANUARY 2025

ಶಿವಮೊಗ್ಗ : ನಕಲಿ ಬಂಗಾರ ಅಡವಿಟ್ಟು ಬ್ಯಾಂಕ್‌ (Bank) ಒಂದಕ್ಕೆ ದಂಪತಿ 1.70 ಲಕ್ಷ ರೂ. ವಂಚಿಸಿದ್ದಾರೆ. ಬ್ಯಾಂಕ್‌ನಲ್ಲಿ ಚಿನ್ನಾಭರಣ ಪರಿಶೀಲಿಸುವ ಅಪ್ರೈಸರ್‌ಗಳು ದಂಪತಿ ಜೊತೆಗೆ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗದ ಶೇಷಾದ್ರಿಪುರಂನ ಬ್ಯಾಂಕ್‌ನಲ್ಲಿ ಶಾಂತಿನಗರದ ದಂಪತಿ ಚಿನ್ನಾಭರಣ ಅಡಮಾನವಿಟ್ಟಿದ್ದರು. ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣದ ಅಸಲಿಯತ್ತು ಪರಿಶೀಲಿಸುವ ಇಬ್ಬರು ಅಪ್ರೈಸರ್‌ಗಳು ಕೂಡ ದಂಪತಿ ಅಡವಿಟ್ಟ ನಕಲಿ ಬಂಗಾರವನ್ನು ಅಸಲಿ ಬಂಗಾರವೆಂದು ತಿಳಿಸಿದ್ದರು. ಅದರಂತೆ ಸಾಲ ಪಡೆದಿದ್ದರು. ಪುನರ್‌ ಪರಶೀಲಿಸಿದಾಗ ದಂಪತಿ ಅಡವಿಟ್ಟಿರುವುದು ನಕಲಿ ಬಂಗಾರ ಎಂಬುದು ಸಾಬೀತಾಗಿದೆ.

Crime-News-General-Image

ಈ ಹಿನ್ನೆಲೆ ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದ ದಂಪತಿ, ಇಬ್ಬರು ಅಪ್ರೈಸರ್‌ಗಳ ವಿರುದ್ಧ ಬ್ಯಾಂಕ್‌ ವತಿಯಿಂದ ದೂರು ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಬ್ಯಾಂಕ್‌ ಮತ್ತು ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ. ಪ್ರಕರಣದ ಕುರಿತು ಜನರಿಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸುದ್ದಿ ಪ್ರಕಟಿಸಲಾಗಿದೆ.)

Kalleshwara-Enterprises.webp

ಇದನ್ನೂ ಓದಿ » ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment