ಶಿವಮೊಗ್ಗ ಲೈವ್
ಶಿವಮೊಗ್ಗ: ಯುವತಿಯೊಬ್ಬರ ಫೋಟೋ ಕದ್ದು ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರೆದು, ಆಶ್ಲೀಲವಾಗಿ ಬರೆದು ಪೋಸ್ಟ್ ಮಾಡಲಾಗಿದೆ. ಇದನ್ನು ಗಮನಸಿದ ಯುವತಿ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಯುವತಿಯು ತಮ್ಮ ಖಾತೆಯಲ್ಲಿ ಹಾಕಿದ್ದ ಫೋಟೋವನ್ನು ಕದಿಯಲಾಗಿದೆ. ಬಳಿಕ ಅಶ್ಲೀಲ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು, ಯುವತಿಯ ಫೋಟೋವನ್ನು ಪ್ರೊಫೈಲ್ಗೆ ಅಪ್ಲೋಡ್ ಮಾಡಲಾಗಿತ್ತು. ಖಾತೆಯ ಪ್ರೊಫೈಲ್ ಬಯೋದಲ್ಲಿ ಆಶ್ಲೀಲವಾಗಿ ಬರೆದು, ಯುವತಿಯ ಕುಟುಂಬದವರ ಮೊಬೈಲ್ ಸಂಖ್ಯೆಯನ್ನು ಪ್ರಕಟಿಸಲಾಗಿತ್ತು ಎಂದು ಆರೋಪಿಸಾಗಿದೆ.

ಇನ್ನು, ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಯುವತಿಯ ಫೋಟೋಗಳನ್ನು ಅವರ ಸಂಬಂಧಿಕರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿ ಕಿರುಕುಳ ನೀಡಲಾಗಿದೆ. ಯುವತಿಯ ಮೊಬೈಲ್ ಸಂಖ್ಯೆಗೂ ಆಶ್ಲೀಲ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.