ಶಿವಮೊಗ್ಗ ಲೈವ್.ಕಾಂ | SORABA NEWS | 13 ಡಿಸೆಂಬರ್ 2021
ಎತ್ತುಗಳ ಮೈ ತೊಳೆಯಲು ಹೋಗಿದ್ದ ರೈತ ಕಾಲ ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೊರಬ ತಾಲೂಕು ಮೂಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮೂಡಿ ಗ್ರಾಮದ ರೈತ ಶಶಿಧರ ಗೊಳೇರ್ (42) ಮೃತ ರೈತ. ಭಾನುವಾರ ಬೆಳಗ್ಗೆ ಎತ್ತುಗಳ ಮೈ ತೊಳೆಯಲು ಶಶಿಧರ ವರದಾ ನದಿ ಕಡೆಗೆ ಬಂದಿದ್ದರು. ಈ ಸಂದರ್ಭ ಕಾಲು ಜಾರಿಗೆ ನದಿಯಲ್ಲಿ ಮುಳುಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸೊರಬ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಕಾರ್ಯಾಚರಣೆ ನಡೆಸಿ, ಶಶಿಧರ ಅವರ ಮೃತದೇಹವನ್ನು ಪತ್ತೆ ಹಚ್ಚಿದರು.
ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಕೆ.ಮಹಾಬಲೇಶ್ವರ, ಸಿಬ್ಬಂದಿ ಡಿ.ವಿ.ಮಂಜುನಾಥ, ವಿ.ನಾಗರಾಜ್, ಪರಶುರಾಮ, ಡಿ.ಕೆ.ನಾಗರಾಜ, ಡಿ.ಬಿ.ರಾಜೇಂದ್ರ ಪಾಲ್ಗೊಂಡಿದ್ದರು. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.