ಸೇತುವೆಯಿಂದ ಕೆಳಗೆ ಹಾರಿದ ಕಾರು | ಬಸ್‌ ಗುದ್ದಿ ಎಮ್ಮೆಗಳು ಸಾವು – 3 ಫಟಾಫಟ್‌ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

FATAFAT CRIME NEWS, 28 AUGUST 2024

ನಡುರಾತ್ರಿ ಸೇತುವೆಯಿಂದ ಕೆಳಗೆ ಹಾರಿದ ಕಾರು

EBEDEF FATAFAT-1-NEW.webpಶಿವಮೊಗ್ಗ ಲೈವ್.ಕಾಂ : ಸಿಗಂದೂರು, ಜೋಗ, ಕೊಲ್ಲೂರು ಪ್ರವಾಸ ಮುಗಿಸಿ ಚಿತ್ರದುರ್ಗದ ತಮ್ಮೂರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗರದಹಳ್ಳಿ ಅಶೋಕನಗರದ ನಡುವೆ ಸೇತುವೆಯಿಂದ ಕೆಳಗೆ ಚಾನಲ್‌ಗೆ ಕಾರು ಹಾರಿದೆ. ಸೋಮವಾರ ರಾತ್ರಿ 2.30ರ ಹೊತ್ತಿಗೆ ಘಟನೆ ಸಂಭವಿಸಿದೆ. ಚಾಲಕ ಕಾರ್ತಿಕ್‌ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಪ್ರಣಪಾಯದಿಂದ ಪಾರಾಗಿದ್ದಾರೆ.

car incident near agaradalli at holehonnuru station limits

ಬಸ್‌ ಡಿಕಿ, ಎರಡು ಎಮ್ಮೆಗಳು ಸ್ಥಳದಲ್ಲೇ ಸಾವು

EBEDEF FATAFAT-2-NEW.webpಶಿವಮೊಗ್ಗ ಲೈವ್.ಕಾಂ : ಮಿನಿ ಬಸ್‌ ಡಿಕ್ಕಿಯಾಗಿ ಗರ್ಭ ಧರಿಸಿದ್ದ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಮೂರು ಎಮ್ಮೆಗಳು ಗಾಯಗೊಂಡಿವೆ. ಈ ಪೈಕಿ ಒಂದು ಎಮ್ಮೆಯ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯ ಜ್ಞಾನದೀಪ ಶಾಲೆ ಸಮೀಪ ಘಟನೆ ಸಂಭವಿಸಿದೆ. ಚಂದ್ರಶೇಖರ್‌ ಮತ್ತು ಗೋಪಾಲ್‌ ಎಂಬುವವರಿಗೆ ಸೇರಿದ ಎಮ್ಮೆಗಳು ಸಾವನ್ನಪ್ಪಿವೆ. ಶಾಲೆ ಸಮೀಪ ಮಠದ ಜಾಗದಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ಹೊಡೆದುಕೊಂಡು ಹೋಗುವಾಗ ಬಸ್‌ ಡಿಕ್ಕಿ ಹೊಡೆದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ ಭದ್ರಾವತಿ ನಗರಸಭೆಗೆ ನೂತನ ಉಪಾಧ್ಯಕ್ಷ, ಕುತೂಹಲ ಮೂಡಿಸಿದ ಮೂವರು ಬಿಜೆಪಿ ಸದಸ್ಯರ ನಡೆ

20 ಲಕ್ಷ ರೂ. ಮೌಲ್ಯದ ಒಡವೆ ನಾಪತ್ತೆ

EBEDEF FATAFAT-3-NEW.webpಶಿವಮೊಗ್ಗ ಲೈವ್.ಕಾಂ : ಮನೆಯ ಬೀರುವಿನಲ್ಲಿಟ್ಟಿದ್ದ 20 ಲಕ್ಷ ರೂ. ಮೌಲ್ಯದ ಒಡವೆಗಳು ಕಳ್ಳತನವಾಗಿದೆ. ವಿನೋದಾ ಎಂಬುವವರು ತಮ್ಮ ಮನೆಯ ಬೀರುವಿನಲ್ಲಿಟ್ಟಿದ್ದ ಹಲವು ಒಡವೆ ಕಳ್ಳತನವಾಗಿದೆ. ಒಂದಷ್ಟು ಒಡವೆ ಕಳುವಾಗಿದ್ದು, ಮತ್ತಷ್ಟು ಒಡವೆ, ನಗದು ಅಲ್ಲಿಯೇ ಇದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಸಮನೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ ಸಾಗರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 28, 2024

Leave a Comment