ಶಿವಮೊಗ್ಗ ಲೈವ್
ಶಿವಮೊಗ್ಗ: ಮದ್ಯ ಸೇವನೆ ಮಾಡಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ₹10,000 ದಂಡ (Fine) ವಿಧಿಸಲಾಗಿದೆ. ಆ.25ರಂದು ವಾಹನಗಳ ತಪಾಸಣೆ ವೇಳೆ ಸರ್ಕಾರಿ ಆಂಬುಲೆನ್ಸ್ ಚಾಲಕನೊಬ್ಬ ಮದ್ಯ ಸೇವಿಸಿರುವ ಅನುಮಾನ ಬಂದಿತ್ತು.
ಆಂಬುಲೆನ್ಸ್ ತಡೆದು ಚಾಲಕನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆಂಬುಲೆನ್ಸ್ ಚಾಲಕನಿಗೆ ದಂಡ ವಿಧಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಈದ್ ಮಿಲಾದ್, ಶಿವಮೊಗ್ಗ ಸಿಟಿಯಲ್ಲಿ ರೂಟ್ ಮಾರ್ಚ್, 3000 ಪೊಲೀಸರಿಂದ ಬಂದೋಬಸ್ತ್, ಹೇಗಿದೆ ಭದ್ರತೆ?
ವಾಹನ ತಪಾಸಣೆ ವೇಳೆ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿ ರಾಜಾಸಾಬ್ ಮತ್ತು ಸುರೇಶ್ ಇದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಗ್ರಾಮಸ್ಥರು ಗರಂ