ಶಿವಮೊಗ್ಗದಲ್ಲಿ ಬೈಕ್‌ ವೀಲಿಂಗ್‌, ಯುವಕನಿಗೆ ಭಾರಿ ದಂಡ, ಪಕ್ಕದ ಬೈಕ್‌ನವನ ಮೇಲೂ ಬಿತ್ತು ಕೇಸ್‌

SHIVAMOGGA LIVE NEWS | 9 JANUARY 2024

SHIMOGA : ರಸ್ತೆಯಲ್ಲಿ ಬೈಕ್‌ ವೀಲಿಂಗ್‌ ಮಾಡಿದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯ 15,500 ರೂ. ದಂಡ ವಿಧಿಸಿದೆ. ವೀಲಿಂಗ್‌ ಮಾಡುವ ವಿಡಿಯೋ ಚಿತ್ರೀಕರಿಸಲು ಮತ್ತೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?

ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್‌ ವೀಲಿಂಗ್‌ ಮಾಡಿದ್ದ. ಇದರ ವಿಡಿಯೋ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆಯ ಹೆಚ್.ಸಿ. ಸಂದೀಪ್‌ ಅವರು ಬೈಕ್‌ಗಳನ್ನು ಪತ್ತೆ ಹಚ್ಚಿದ್ದರು. ತನಿಖೆ ನಡೆಸಿದ ಪಿಎಸ್‌ಐ ತಿರುಮಲೇಶ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Kalleshwara-Enterprises.webp

ಎರಡು ಬೈಕ್‌ನವರಿಗು ದಂಡ

ವಿಚಾರಣೆ ನಡಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವೀಲಿಂಗ್‌ ಮಾಡಿದ ಬೈಕ್‌ ಸವಾರ ಮತ್ತು ಹಿಂಬದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದ ಬೈಕ್‌ ಸವಾರನಿಗೆ ದಂಡ ವಿಧಿಸಿದೆ. ವೀಲಿಂಗ್‌ ಮಾಡಿದ್ದ ಬೈಕ್‌ ಸವಾರ ರೇಸಿಂಗ್‌, ಡಿ.ಎಲ್‌. ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಬೈಕ್‌ನಲ್ಲಿ ಸೈಡ್‌ ಮಿರರ್‌ಗಳಿಲ್ಲದಿರುವುದಕ್ಕೆ 15,500 ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದ ಬಳಿಕ ಮಂಗನ ಕಾಯಿಲೆಗೆ ಮೊದಲ ಬಲಿ, ನಗರ ಹೋಬಳಿಯಲ್ಲಿ ಆತಂಕ

ವೀಲಿಂಗ್‌ ಮಾಡಿದರೆ ದಂಡ ಫಿಕ್ಸ್‌

ಶಿವಮೊಗ್ಗ ನಗರದಲ್ಲಿ ಬೈಕ್‌ ವೀಲಿಂಗ್‌ ಮಾಡಿದ ಹಲವರಿಗೆ ಈಗಾಗಲೆ ದಂಡ ವಿಧಿಸಲಾಗಿದೆ. ಇದರಿಂದ ನಗರದಲ್ಲಿ ಬೈಕ್‌ ಸ್ಟಂಟ್‌ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಆಗಾಗ ಇಂತಹ ಪ್ರಕರಣ ವರದಿಯಾಗುತ್ತಿದ್ದು, ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment