ಶಿವಮೊಗ್ಗದಲ್ಲಿ ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ದಂಡ, ಕಾರಣವೇನು?

SHIVAMOGGA LIVE NEWS | 24 JUNE 2024➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA : ಅಪ್ರಾಪ್ತನ ಕೈಗೆ ವಾಹನ ಚಾಲನೆಗೆ ಅವಕಾಶ ನೀಡಿ ನಿಯಮ ಉಲ್ಲಂಘಿಸಿದ ನಂದಿನಿ ಹಾಲಿನ ವಾಹನದ ಮಾಲೀಕನಿಗೆ ನ್ಯಾಯಾಲಯ ದಂಡ (Fine) ವಿಧಿಸಿದೆ. ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಲಕನೊಬ್ಬ ಸಮವಸ್ತ್ರ ಧರಿಸದೆ ವಾಹನ ಚಲಾಯಿಸುತ್ತಿದ್ದ. ಸಂಚಾರ ಠಾಣೆ ಎಎಸ್‌ಐ ಮೋಹನ್‌ ಮತ್ತು ಸಿಬ್ಬಂದಿ ಕಿರಣ್‌ ಅವರು ವಾಹನವನ್ನು ತಡೆದು ಪರಿಶೀಲಿಸಿದಾಗ ನಂಬರ್‌ ಪ್ಲೇಟ್‌ ಸಹ ದೋಷದಿಂದ ಕೂಡಿತ್ತು. ವಾಹನ ಚಾಲಕ ಅಪ್ರಾಪ್ತ ಎಂದು ಪೊಲೀಸರಿಗೆ ತಿಳಿಯಿತು.

ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌ ಅವರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ ನ್ಯಾಯಾಲಯವು ವಾಹನದ ಮಾಲೀಕ, ಟಿಪ್ಪು ನಗರದ ಧನುಷ್‌ ಎಂಬುವವರಿಗೆ 25,500 ರೂ. ದಂಡ ವಿಧಿಸಿದ ಆದೇಶಿಸಿದೆ.

ಇದನ್ನೂ ಓದಿ – ಯಡೂರು ಸಮೀಪ ಅಬ್ಬಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು, ಯುವಕ ನೀರುಪಾಲು

Leave a Comment